ಹಿರಿಯರ ದಿನದಂದು ಶತಾಯುಷಿಗಳಿಗೆ ಗೌರವಾರ್ಪಣೆ: ಚಂದ್ರ ನಾಯ್ಕ್
ಉಡುಪಿ, ಸೆ.12: ಅ.1ರಂದು ನಡೆಯುವ ಹಿರಿಯ ನಾಗರಿಕರ ದಿನಾಚರಣೆ ಯಂದು, ಜಿಲ್ಲೆಯಲ್ಲಿರುವ ಶತಾಯುಷಿಗಳನ್ನು ಗುರುತಿಸಿ ಗೌರಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಧಿಕಾರಿ ಚಂದ್ರ ನಾಯ್ಕ ಹೇಳಿದ್ದಾರೆ.
ಗುರುವಾರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ, ಹಿರಿಯ ನಾಗರಿಕರಿಗೆ ಕ್ರೆಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಸೆ.25ರಂದು ರೆಡ್‌ಕ್ರಾಸ್ ಅವರಣದಲ್ಲಿ ಏರ್ಪಡಿಸಲಾಗುವುದು. ಹಾಗೂ ಇದಕ್ಕೆ ಸ್ಥಳದಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಚಂದ್ರನಾಯ್ಕ್ ಹೇಳಿದರು.
ಅ.1ರಂದು ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಪಾಲನೆ ಪೋಷಣೆ ಕಾನೂನು ಕುರಿತು ಉಪನ್ಯಾಸ ಏರ್ಪಡಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಜಾಹ್ನವಿ, ಹಿರಿಯ ನಾಗರಿಕ ಸಂಸ್ಥೆಯ ಸದಸ್ಯೆ ಎ.ಲಕ್ಷೆಬಾಯಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಂಯೋಜಕ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗಣೇಶ್ ಸ್ವಾಗತಿಸಿ ವಂದಿಸಿದರು.







