ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಗೆ ಮತ್ತು ಉಸಿರಾಟದ ತೊಂದರೆ: ಜಿಲ್ಲಾಸ್ಪತ್ರೆಗೆ ದಾಖಲು
ಐಸಿಯುನಲ್ಲಿ ಚಿಕಿತ್ಸೆ

ಕಾರವಾರ, ಸೆ.12: ಜಾನಪದ ಗಾಯಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ (83) ಅವರಿಗೆ ಮತ್ತೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ನಗರದ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಕೋಲಾ ತಾಲೂಕಿನ ಬಡಗೇರಿಯಲ್ಲಿರುವ ತಮ್ಮ ನಿವಾಸದಲ್ಲಿದ್ದ ಅವರಿಗೆ, ಗುರುವಾರ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತ್ತು. ಈ ಬಗ್ಗೆ ಸುಕ್ರಜ್ಜಿಯ ಕಾಳಜಿ ವಹಿಸುತ್ತಿರುವ ಸಂಬಂಧಿಕರು ಅವರನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು 108 ಆ್ಯಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಿ ತೀರ್ವ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರ ಕರ್, ಸುಕ್ರಜ್ಜಿ ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಕಳೆದ ಬಾರಿಯೂ ಇದೆ ಸಮಸ್ಯೆ ಉಂಟಾಗಿತ್ತು. ಅವರಿಗೆ ಈಗ ಉಬ್ಬಸ ಆರಂಭವಾಗಿದೆ. ಈ ಬಾರಿ ಸಮಸ್ಯೆ ಸ್ವಲ್ಪಹೆಚ್ಚಿನ ಪ್ರಮಾಣದಲ್ಲೇ ಇದೆ. ಸಿಟಿ ಸ್ಕ್ಯಾನ್ ಮಾಡಿಸುತ್ತೇವೆ. ತುರ್ತು ನಿಗಾ ಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.
ವೈದ್ಯರಾದ ಡಾ. ಅಮಿತ ಕಾಮತ, ಡಾ. ಪ್ರಸನ್ನ, ಡಾ. ಅನುಪಮಾ ಹಾಗೂ ಡಾ. ಭುತೆ ಸುಕ್ರಜ್ಜಿಯ ತಪಾ ಸಣೆ ನಡೆಸಿದ್ದಾರೆ. ಈ ವೇಳೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಇದ್ದರು.







