ಹೆಜ್ಜೇನು ದಾಳಿ: 25 ಮಂದಿ ಅಸ್ವಸ್ಥ
ಮಂಡ್ಯ, ಸೆ.12: ಶವ ಸಂಸ್ಕಾರ ಮೆರವಣಿಗೆ ವೇಳೆ ಹೆಜ್ಜೇನು ದಾಳಿಯಿಂದ ಸುಮಾರು 25 ಜನರು ಅಸ್ವಸ್ಥಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ಗುರುವಾರ ನಡೆದಿದೆ.
ಲಿಂಗಪಟ್ಟಣ ಗ್ರಾಮದ ಮಲ್ಲೇಶ್ ಎಂಬ ವ್ಯಕ್ತಿಯ ಅಂತ್ಯ ಸಂಸ್ಕಾರದ ಮೆರವಣಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಪರಿಣಾಮ ಶವವನ್ನು ರಸ್ತೆ ಮಧ್ಯೆ ಬಿಟ್ಟು ಜನರು ಓಡಿ ಹೋಗಿದ್ದು, ಕೆಲವು ಜನರು ಅಪಾಯದಿಂದ ಪಾರಾಗಿದ್ದಾರೆ.
ಹೆಜ್ಜೇನು ದಾಳಿಯಿಂದ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಹಲಗೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ.
Next Story





