Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಷ್ಟ್ರೀಯವಾದ: ಸ್ಟಾಕ್‌ಹೋಮ್ ಸಿಂಡ್ರೋಮ್

ರಾಷ್ಟ್ರೀಯವಾದ: ಸ್ಟಾಕ್‌ಹೋಮ್ ಸಿಂಡ್ರೋಮ್

ಮಿಥಾಲಿ ಸರಣ್ಮಿಥಾಲಿ ಸರಣ್13 Sept 2019 11:43 PM IST
share
ರಾಷ್ಟ್ರೀಯವಾದ: ಸ್ಟಾಕ್‌ಹೋಮ್ ಸಿಂಡ್ರೋಮ್

ನಮ್ಮ ಮುಖ್ಯಧಾರೆ ಮಾಧ್ಯಮದ ಬಹುದೊಡ್ಡ ಭಾಗ ತನ್ನ ದಾಳಿಗೆ ಭಾರತದ ನಾಗರಿಕರನ್ನೇ ಗುರಿಯಾಗಿಸಿಕೊಂಡಿದೆ. ಅದು ಅವಮಾನಿಸುವುದು, ನಿಂದಿಸುವುದು ವಿದ್ಯಾರ್ಥಿಗಳನ್ನು ಹಾಗೂ ವಿದ್ವಾಂಸರನ್ನು, ಲೇಖಕರನ್ನು ಹಾಗೂ ಕಲಾವಿದರನ್ನು, ಭಿನ್ನಮತೀಯರನ್ನು, ವಿವೇಕವುಳ್ಳ ಪತ್ರಕರ್ತರನ್ನು ಮತ್ತು ರಾಜಕೀಯ ಎದುರಾಳಿಗಳನ್ನು. ಅದು ಸರಕಾರದ ಪರವಾಗಿ ನಿಂತು ವಾಸ್ತವವನ್ನು ತಿರುಚುತ್ತ್ತದೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತದೆ. ನೀವೆಂದಾದರೂ ಅರ್ನಬ್ ಗೋಸ್ವಾಮಿಯವರನ್ನು ಅವರ ರೌದ್ರಾವತಾರಗಳಲ್ಲಿ ನೋಡಿದರೆ ನಿಮಗೆ ನಾನು ಹೇಳುತ್ತಿರುವುದೇನೆಂದು ಅರ್ಥವಾಗುತ್ತದೆ.

ಪತ್ರಿಕೋದ್ಯಮ ಮಾಡಬೇಕಾದ ಒಂದು ಮುಖ್ಯ ಕೆಲಸ: ಸಾರ್ವಜನಿಕ ಹಿತಾಸಕ್ತಿಗಾಗಿ ಅಧಿಕಾರದಲ್ಲಿರುವವರನ್ನು ಉತ್ತರದಾಯಿಗಳನ್ನಾಗಿ ಮಾಡುವುದು. ಅಂದರೆ ದುರ್ಬಲರನ್ನಲ್ಲ, ಬಲಿಷ್ಠರನ್ನು; ವಿಪಕ್ಷವನ್ನಲ್ಲ, ಸರಕಾರವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನಕ್ಕೆ ಗುರಿಪಡಿಸುವುದು. ಪತ್ರಿಕೋದ್ಯಮ ನ್ಯಾಯಕ್ಕಾಗಿ ಕೈ ಎತ್ತಬೇಕೇ ಹೊರತು ಸಮಯ ಸಾಧಕತನಕ್ಕಲ್ಲ; ವ್ಯಕ್ತಿಯ ಹಕ್ಕುಗಳಿಗಾಗಿ ಹೋರಾಡಬೇಕೇ ಹೊರತು ರಾಜಕೀಯ ಬಹುಮತದ ಆಡಳಿತಕ್ಕಲ್ಲ; ಧ್ವನಿ ಇಲ್ಲದವರಿಗೆ ಅದು ಧ್ವನಿ ನೀಡಬೇಕೇ ಹೊರತು ಸರಕಾರದ ತುತ್ತೂರಿಯಾಗಬಾರದು.
ಆದರೂ ಈಗ 2019ರಲ್ಲಿ, ಬೆರಳೆಣಿಕೆಯ ಅಪವಾದಗಳನ್ನು ಹೊರತುಪಡಿಸಿದರೆ ಮಾಧ್ಯಮಗಳು ಸತತವಾಗಿ ಸರಕಾರದ ಹೊಗಳು ಭಟರಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾದರೆ ಮಿಲಿಯಗಟ್ಟಲೆ ವೀಕ್ಷಕರ ಹಾಗೂ ಓದುಗರ ಮತ್ತು ಭವಿಷ್ಯದ ತಲೆಮಾರುಗಳ ತಿರಸ್ಕಾರದ ಭಯವಿಲ್ಲದೆ ಪತ್ರಕರ್ತರು, ಪತ್ರಿಕೋದ್ಯಮಿಗಳು ತಮ್ಮ ಆತ್ಮಗೌರವವನ್ನು, ಸ್ವಾಭಿಮಾನವನ್ನು ಯಾಕಾಗಿ ಕಳೆದುಕೊಳ್ಳುತ್ತಿದ್ದಾರೆ?

ಯಾಕಾಗಿ ಅಂದರೆ ಅದೊಂದು ರೀತಿಯ ಸ್ಟಾಕ್ ಹೋಮ್ ಸಿಂಡ್ರೋಮ್ ಎಂದು ನನಗನ್ನಿಸುತ್ತದೆ. ಯಾವುದೋ ಒಂದು ಕೊಳಕು ನೆಲಮಾಳಿಗೆಯಲ್ಲಿ ಸರಪಳಿಗಳಿಂದ ತೂಗು ಹಾಕಲ್ಪಟ್ಟು ನೀರು, ಆಹಾರ, ನಿದ್ದೆ ಸಿಗದಂತೆ ಮಾಡಿ ಅತ್ಯಾಚಾರಕ್ಕೊಳಪಡಿಸಿ ಬಂಧನದಲ್ಲಿಟ್ಟಾಗಲೂ ಬಂಧಿತರು ತನ್ನನ್ನು ದಮನಿಸಿದವರ ಪರವಹಿಸಿ ಅವರಿಗೆ ನಿಷ್ಠೆ ತೋರುವುದನ್ನು ಸ್ಟಾಕ್‌ಹೋಮ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

 ಒಂದು ರೀತಿಯ ಸ್ಟಾಕ್‌ಹೋಮ್ ಸಿಂಡ್ರೋಮ್ ಎಂದು ಯಾಕೆ ಹೇಳುತ್ತಿದ್ದೇನೆಂದರೆ ಸಾಮಾನ್ಯವಾಗಿ ಒತ್ತೆಯಾಳುಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಒತ್ತೆಯಾಳಾಗಿ ಇರಿಸಲಾಗುತ್ತದೆ. ಅವರ ಇಷ್ಟಕ್ಕೆ ವಿರುದ್ಧವಾಗಿ ಅವರನ್ನು ಅಪಹರಿಸಲಾಗುತ್ತದೆ. ಅಂದರೆ ಮಾಧ್ಯಮಗಳ ವಿಷಯದಲ್ಲಿ ಸರಕಾರವು ಜಾಹೀರಾತುಗಳನ್ನು ಹಿಂದಕ್ಕೆ ಪಡೆಯುವ ಅಥವಾ ಜಾಹೀರಾತುಗಳನ್ನು ಕೊಡದಿರುವ ಮೂಲಕ ಅಥವಾ ಅವುಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವ ಅಥವಾ ಮಾಲಕರ/ ನೌಕರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳನ್ನು ಛೂಬಿಡುವ ಮೂಲಕ ಕೆಲವು ಮಾಧ್ಯಮಗಳನ್ನು ಕಟ್ಟಿಹಾಕಿ ಅವುಗಳ ಬಾಯಿಗೆ ಬಟ್ಟೆ ತುರುಕುತ್ತದೆ. ಆದರೆ ಆಗ ಮಾಧ್ಯಮಗಳಲ್ಲಿರುವ ಇತರರು ತಾವಾಗಿಯೇ ನೆಲಮಾಳಿಗೆಗೆ ಧಾವಿಸುತ್ತಾರೆ. ಧಾವಿಸಿ ತಮ್ಮನ್ನು ತಾವೇ ಹಗ್ಗಗಳಿಂದ ಬಿಗಿದುಕೊಂಡು ತಮ್ಮ ಬಾಯಿಗೆ ತಾವೇ ಬಟ್ಟೆ ತುರುಕಿಸಿಕೊಳ್ಳುತ್ತಾರೆ. ಹೀಗೆ ಮಾಡಿ ಎಂದು ಅವರಿಗೆ ಯಾರೂ ಕುಮ್ಮಕ್ಕು ನೀಡಿರುವುದಿಲ್ಲ ಮತ್ತು ತಾವು ಮಾಡಿದ್ದಕ್ಕೆ ತಮ್ಮ ಯಜಮಾನರಿಂದ, ಸರಕಾರದಿಂದ ಒಪ್ಪಿಗೆ ದೊರಕಬೇಕೆಂದು ಹಾತೊರೆಯುತ್ತಿರುತ್ತಾರೆ.

ಈ ರೀತಿಯಾಗಿ ಸ್ಟಾಕ್‌ಹೋಮ್ ಸಿಂಡ್ರೋಮ್‌ನಿಂದ ಬಾಧಿತವಾಗಿರುವ ಮಾಧ್ಯಮ ಮೂಲತಃ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವಿನ ಗೆರೆಯನ್ನೇ ಅಳಿಸಿ ಹಾಕಿದೆ. ಸರಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿಹಿಡಿಯಬೇಕು; ಮಾಧ್ಯಮವು ರಾಷ್ಟ್ರೀಯ ಹಿತಾಸಕ್ತಿಯ ನಿಟ್ಟಿನಲ್ಲಿ ಸರಕಾರ ತೆಗೆದುಕೊಳ್ಳುವ ಕ್ರಮಗಳ, ಅದು ಇಡುವ ಹೆಜ್ಜೆಗಳ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಬೇಕು. ಸಾರ್ವಜನಿಕರ ಮತ್ತು ಸಂವಿಧಾನದ ದೃಷ್ಟಿಯಿಂದ ಮಾಧ್ಯಮ ಈ ಕೆಲಸ ಮಾಡಬೇಕು.

ಆದರೆ ಈಗ ಬಹುತೇಕ ಪತ್ರಕರ್ತರು ಸರಕಾರದ ಹಿತಾಸಕ್ತಿಯ ದೃಷ್ಟಿಯಿಂದ ಯೋಚಿಸುತ್ತಿದ್ದಾರೆ ಮತ್ತು ಸದ್ಯದಲ್ಲೇ, ಮಾಧ್ಯಮ ತಮ್ಮ ಮೇಲೆ ಬೀರಿರುವ ಪರಿಣಾಮದ ಫಲವಾಗಿ ನಾಗರಿಕರು ಕೂಡ ಹೀಗೆಯೇ (ತಮ್ಮ ಹಿತಾಸಕ್ತಿಗೆ ಬದಲಾಗಿ) ಸರಕಾರದ ಹಿತಾಸಕ್ತಿಯ ದೃಷ್ಟಿಯಿಂದಲೇ ಯೋಚಿಸಲಾರಂಭಿಸುತ್ತಾರೆ. ಸಾರ್ವಜನಿಕರ ಬದುಕು, ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಬದಲಾಗಿ ‘ರಾಷ್ಟ್ರೀಯ ಹಿತಾಸಕ್ತಿ’ ಎಂಬ ಒಳಗೆ ಏನಿದೆ ಎಂದು ಪರೀಕ್ಷಿಸದ ಒಂದು ಕಪ್ಪುಪಟ್ಟಿಗೆಯ ಹೆಸರಿನಲ್ಲಿ ಎಲ್ಲರೂ ಈ ಎಲ್ಲವುಗಳನ್ನು ಹತ್ತಿಕ್ಕುವ ಸರಕಾರದ ಹಕ್ಕನ್ನು ಸಮರ್ಥಿಸಲಾರಂಭಿಸುತ್ತಾರೆ.

ಹೀಗಾಗಿಯೇ ಇರಬೇಕು ನಾವು ನಮ್ಮ ಹಕ್ಕುಗಳನ್ನು, ನಮ್ಮ ಖಾಸಗಿತನವನ್ನು, ನಮ್ಮ ಸ್ವಾಯತ್ತೆಯನ್ನು ಮತ್ತು ನಮ್ಮ ಸ್ವತಂತ್ರ ಚಿಂತನಾ ಶಕ್ತಿಗಳನ್ನು, ಅಧಿಕಾರಗಳನ್ನು ಸರಕಾರಕ್ಕೆ ಸಂತೋಷದಿಂದ ಬಿಟ್ಟು ಕೊಡುತ್ತಿದ್ದೇವೆ. ನಮ್ಮ ಮೇಲೆ ಗೂಢಚರ್ಯೆ ನಡೆಸುವ ವ್ಯವಸ್ಥೆಗಳಿಗೆ, ಗೃಹ ಸಚಿವಾಲಯಕ್ಕೆ, ಸರಕಾರದ ಪ್ರಚಾರ ಯಂತ್ರಕ್ಕೆ ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುತ್ತಾ ಸಂತೋಷದಿಂದ ನಾಚುತ್ತಿದ್ದೇವೆ.
ನಮ್ಮನ್ನು ಕಾಪಾಡಲು ಪೊಲೀಸರಾಗಲಿ ಅಥವಾ ಸಮಾಲೋಚಕರಾಗಲಿ ಮುಂದೆ ಬರುತ್ತಿಲ್ಲ. ನಾವು ಪ್ರಾಯಶಃ ನಮ್ಮನ್ನು ನಾವಿರುವಲ್ಲೇ, ನಾವಿರುವ ಸ್ಥಿತಿಯಲ್ಲೇ ಬಿಟ್ಟು ಬಿಡಿ ಎಂದು ಅಂಗಲಾಚುತ್ತೇವೆ.
ನೆಮ್ಮದಿಯಿಂದ ಶಾಂತಿಯಲ್ಲಿ ನಮ್ಮ ಯಜಮಾನರುಗಳನ್ನು ಪೂಜಿಸಲು ನಾವಿರುವ ಹಾಗೆ ನಮ್ಮನ್ನು ಬಿಟ್ಟುಬಿಡಿ ಎಂದು ನಾವು ಬೇಡಿಕೊಳ್ಳುತ್ತೇವೆ.

ಕೃಪೆ: ಡೆಕ್ಕನ್ ಹೆರಾಲ್ಡ್

share
ಮಿಥಾಲಿ ಸರಣ್
ಮಿಥಾಲಿ ಸರಣ್
Next Story
X