ಜೂಜಾಟ ಕ್ಲಬ್ಗಳ ಮೇಲೆ ಸಿಸಿಬಿ ದಾಳಿ: 39 ಮಂದಿಯ ಬಂಧನ, ನಗದು ಜಪ್ತಿ
ಬೆಂಗಳೂರು, ಸೆ.14: ಹಣ ಪಣವಾಗಿಟ್ಟುಕೊಂಡು ಜೂಜಾಟ ಆಡುತ್ತಿದ್ದ ಎರಡು ಕ್ಲಬ್ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 39 ಜನರನ್ನು ಬಂಧಿಸಿದ್ದಾರೆ.
ಇಲ್ಲಿನ ಫ್ರೇಜರ್ಟೌನ್ನ ಮೀಲರ್ಸ್ ರಸ್ತೆಯ ಕಟ್ಟಡವೊಂದರಲ್ಲಿ ಮಾಸ್ ರಾಯಲ್ ರಿಕ್ರಿಯೇಷನ್ ಕ್ಲಬ್ನ ಸದಸ್ಯರಲ್ಲದ ಕೆಲವರು ಹಣ ಪಣವಾಗಿ ಕಟ್ಟಿಕೊಂಡು ಜೂಜಾಟವನ್ನು ಆಡುತ್ತಿದ್ದಾರೆಂಬ ಮಾಹಿತಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ 18 ಜನರನ್ನು ಬಂಧಿಸಿ 66 ಸಾವಿರ ರೂ. ನಗದು ಜಪ್ತಿ ಮಾಡಿ ಇಲ್ಲಿನ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ, ಬಿಟಿಎಂ 4ನೇ ಹಂತ, 2ನೇ ಬ್ಲಾಕ್ನ ರಸ್ತೆಯಲ್ಲಿರುವ ಸಿಂಚನ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ನಲ್ಲಿ ಸದಸ್ಯರಲ್ಲದ ವ್ಯಕ್ತಿಗಳನ್ನು ಸೇರಿಸಿಕೊಂಡು ಇಸ್ಪೀಟ್ ಎಲೆಗಳಿಂದ ಜೂಜಾಟ ಆಡಿಸುತ್ತಾರೆಂಬ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳೀ ನಡೆಸಿ 21 ಜನರನ್ನು ಬಂಧಿಸಿ, 51 ಸಾವಿರ ರೂ. ನಗದು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.