ಫ್ರಾನ್ಸ್ನಲ್ಲಿ ಆಶ್ರಯ ಪಡೆಯಲು ಬಯಸಿದ ಎಡ್ವರ್ಡ್ ಸ್ನೋಡನ್
ಪ್ಯಾರಿಸ್, ಸೆ. 14: 9/11ರ ಭಯೋತ್ಪಾದಕ ದಾಳಿ ಬಳಿಕ, ಅಮೆರಿಕ ವಿವಿಧ ದೇಶಗಳ ಮೇಲೆ ಬೇಹುಗಾರಿಕೆ ನಡೆಸಿರುವುದನ್ನು ತೋರಿಸುವ ಭಾರೀ ಪ್ರಮಾಣದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿರುವ ಅಮೆರಿಕದ ಸೇನಾ ಗುತ್ತಿಗೆದಾರ ಎಡ್ವರ್ಡ್ ಸ್ನೋಡನ್, ಫ್ರಾನ್ಸ್ನಲ್ಲಿ ಆಶ್ರಯ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಅವರು ಈಗ ರಶ್ಯದಲ್ಲಿ ವಾಸಿಸುತ್ತಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ನನಗೆ ಆಶ್ರಯ ಒದಗಿಸುತ್ತಾರೆ ಎಂಬ ಭರವಸೆಯನ್ನು ಫ್ರಾನ್ಸ್ನ ‘ಫ್ರಾನ್ಸ್ ಇಂಟರ್ ರೇಡಿಯೊ’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾನು 2013ರಲ್ಲೇ ಆಗಿನ ಅಧ್ಯಕ್ಷ ಫ್ರಾಂಸ್ವ ಹೊಲಾಂಡ್ ನೇತೃತ್ವದ ಫ್ರಾನ್ಸ್ ಸರಕಾರಕ್ಕೆ ಆಶ್ರಯ ಕೋರಿ ಮನವಿ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.
ಅವರ ಆತ್ಮಚರಿತ್ರೆ ‘ಪರ್ಮನೆಂಟ್ ರೆಕಾರ್ಡ್’ ಮಂಗಳವಾರ ಬಿಡುಗಡೆಗೊಳ್ಳಲಿದೆ.
‘‘ಅಮೆರಿಕದ ಹೋರಾಟಗಾರನಿಗೆ ಯುರೋಪ್ನಲ್ಲಿ ಆಶ್ರಯ ಸಿಗದೆ, ಇಲ್ಲಿ ರಶ್ಯದಲ್ಲಿ ಆಶ್ರಯ ಸಿಕ್ಕಿರುವುದು ನಿಜವಾಗಿಯೂ ಅತ್ಯಂತ ದುರ್ದೈವದ ಸಂಗತಿಯಾಗಿದೆ’’ ಎಂದರು.
Next Story