Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಿಟ್ಟೆ ವಿವಿ 9ನೇ ಘಟಿಕೋತ್ಸವ:...

ನಿಟ್ಟೆ ವಿವಿ 9ನೇ ಘಟಿಕೋತ್ಸವ: 257ಸ್ನಾತಕೋತ್ತರ, 643 ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ14 Sept 2019 10:45 PM IST
share
ನಿಟ್ಟೆ ವಿವಿ 9ನೇ ಘಟಿಕೋತ್ಸವ: 257ಸ್ನಾತಕೋತ್ತರ, 643 ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕೊಣಾಜೆ: ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. 900 ವಿಶ್ವವಿದ್ಯಾಲಯ, 40 ಸಾವಿರ ಕಾಲೇಜು, 1.3 ಮಿಲಿಯನ್ ಶಿಕ್ಷಕರು ಮತ್ತು 36.6 ಮಿಲಿಯನ್ ವಿದ್ಯಾರ್ಥಿಗಳೊಂದಿಗೆ ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೂಲಕ ಮಾನವೀಯ ಸಮಾಜವನ್ನು ನಿರ್ಮಿಸುವ ತನ್ನ ದೃಷ್ಠಿಕೋನದ ಮೇಲೆ ದೃಢ ನಂಬಿಕೆಯಿಟ್ಟಿರುವ ನಿಟ್ಟೆ ವಿಶ್ವವಿದ್ಯಾಲಯ ಈಗಾಗಲೇ ಭಿನ್ನತೆಯತ್ತ ಸಾಗಲು ಆರಂಭಿಸಿದೆ ಎಂದು ಎಂದು ಯುನೈಟೆಡ್ ಕಿಂಗಡಮ್ ನ  ಕೆಂಟ್ ಕ್ರೈಸ್ಟ್ ಚರ್ಚ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮ ತಿರುಣಮ ಚಂದ್ರನ್ ಅಭಿಪ್ರಾಯಪಟ್ಟರು.

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಿಟ್ಟೆ ಮೈದಾನದಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ 9ನೇ  ಘಟಿಕೋತ್ಸವದಲ್ಲಿ ಅವರು ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾತನಾಡಿದರು.

ಯುವಜನತೆಯ ವಿಚಾರದಲ್ಲೂ  ಅನುಪಾತ ಹಾಗೂ ಬೆಳವಣಿಗೆಯೊಂದಿಗೆ ಪ್ರಪಂಚದಲ್ಲಿ ಅತಿ‌ಹೆಚ್ಚು ಯುವಕ ಯುವತಿಯರನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ನಮ್ಮ‌ದೇಶ ಮೊದಲ‌ ಸ್ಥಾನದಲ್ಲಿದ್ದು ಅವೆಲ್ಲವನ್ನು ಪರಿಗಣಿಸಿದಾಗ ಭಾರತ ಮುಂದಿನ ದಿನಗಳಲ್ಲಿ ವಿಶ್ವದ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗೆ ತೆರೆದುಕೊಳ್ಳುವ  ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ನಿಟ್ಟೆ ಮತ್ತು ಯುನೈಟೆಡ್ ಕಿಂಗ್ ಡಮ್ ನ‌ ಕೆಂಟ್ ಕ್ರೈಸ್ಟ್ ವಿಶ್ವವಿದ್ಯಾಲಯದ ಮಧ್ಯದ ಒಡಂಬಡಿಕೆ ಬಗ್ಗೆ ನನಗೆ ಹೆಮ್ಮೆಯಿದೆ. ಎರಡು ವಿವಿ ಸಮಾನ ದೃಷ್ಟಿಕೋನ ಹೊಂದಿದ್ದು ಕೋಶಕಾಂಡದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಹದಿನೈದು ಪದವೀಧರರಿಗೆ ಹಾಗೂ ಐದು  ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿಟ್ಟೆ ವಿಶ್ವವಿದ್ಯಾಲಯದ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಸಾಧಕ 18ಪದವಿ ಹಾಗೂ 29 ಸ್ನಾತಕೋತ್ತರ ಪದವೀಧರರಿಗೆ ಗಣ್ಯರ ಪ್ರಾಯೋಜಕತ್ವದ ಇಪ್ಪತ್ತು ಹಾಗೂ ನಿಟ್ಟೆ ವಿವಿಯಿಂದ ಹತ್ತು ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ-), ಮಾಸ್ಟರ್ ಆಫ್ ಚಿರುರ್ಗಿಯ (ಎಂ.ಸಿ.ಎಚ್.ಯೂರೋಲಾಜಿ-), ಡಾಕ್ಟರ್ ಆಫ್ ಮೆಡಿಸಿನ್ (ಎಂಡಿ), ಮಾಸ್ಟರ್ ಆಫ್ ಸರ್ಜರಿ (ಎಂಎಸ್), ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್), ಮಾಸ್ಟರ್ ಆಫ್ ಫಾರ್ಮಸಿ (ಎಂ.ಫಾರ್ಮ್), ಎಂ.ಎಸ್ಸಿ (ನರ್ಸಿಂಗ್), ಮಾಸ್ಟರ್ ಆಫ್ ಫಿಸಿಯೋಥೆರಪಿ, ಎಂಎ (ಜೆ&ಎಂಸಿ), ಎಂ.ಎಸ್ಸಿ (ಬಯೋಮೆಡಿಕಲ್ ಸೈನ್ಸಸ್), ಎಂ.ಎಸ್ಸಿ (ಫುಡ್ ಸೇಫ್ಟಿ & ಬಯೋ ಟೆಕ್ನಾಲಜಿ), ಎಂಪಿಎಚ್, ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ ಡಿ), ಡಾಕ್ಟರ್ ಆಫ್ ಫಾರ್ಮಸಿ (ಪೋಸ್ಟ್ ಬ್ಯಾಕಲೌರಿಯೇಟ್), ಎಂಬಿಬಿಎಸ್, ಬಿಡಿಎಸ್, ಬಿ.ಫಾರ್ಮ, ಬಿಎಸ್ಸಿ (ನರ್ಸಿಂಗ್), ಪಿ.ಬಿ.ಬಿಎಸ್ಸಿ. (ನರ್ಸಿಂಗ್), ಬಿ.ಪಿ.ಟಿ, ಬಿ.ಎಸ್ಸಿ (ಎಂಐಟಿ), ಬಿ.ಎಸ್ಸಿ (ಎಒಟಿಟಿ), ಬಿ.ಎಸ್ಸಿ (ಎಂಎಲ್‌ಟಿ), ಬಿಎ (ಜೆ&ಎಂಸಿ) ಮತ್ತು ಬಿಎಸ್ಸಿ (ಬಯೋಮೆಡಿಕಲ್ ಸೈನ್ಸ್)ನ ಒಟ್ಟು 643 ಪದವಿ ಹಾಗೂ 257ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಭಾರತ ಸರಕಾರದ ಅಟಾಮಿಕ್ ಎನರ್ಜಿ ವಿಭಾಗದ ಹೋಮಿ ಬಾಬ ಸಂಶೋಧನಾ ಕೇಂದ್ರದ ಸಲಹೆಗಾರ ಪ್ರೊಫೆಸರ್ ರಾಜಗೋಪಾಲ್ ಚಿದಂಬರಂ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ ಅವರಿಗೆ ನಿಟ್ಟೆ ವಿವಿಯ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಲಾಯಿತು.

ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ, ಘಟಿಕೋತ್ಸವ ನಡೆಸಿಕೊಟ್ಟರು. ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ, ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ವಿವಿ ಪರೀಕ್ಷಾಂಗ ಕುಲಸಚಿವ ಡಾ. ಪ್ರಸಾದ್ ಬಿ. ಶೆಟ್ಟಿ, ವಿವಿಧ ವಿಭಾಗದ ಡೀನ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿ, ಘಟಿಕೋತ್ಸವ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸಮಗ್ರ ವಿವರ ನೀಡಿದರು. ಸಹ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಹಾಗೂ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ ಸನ್ಮಾನಿತರನ್ನು ಪರಿಚಯಿಸಿದರು. ಡಾ. ಸಿದ್ದಾರ್ಥ್ ಕಾರ್ಯಕ್ರಮ ನಿರೂಪಿಸಿದರು.

ಡಾಕ್ಟರ್ ಆಫ್ ಫಿಲಾಸಫಿ -19,  ವೈದ್ಯಕೀಯ-221( ಎಮ್‌ಸಿಎಚ್ 1+ ಪಿಜಿ-81+ಯುಜಿ-139), ದಂತ ವೈದ್ಯಕೀಯ-142(  ಪಿಜಿ-47+ ಯುಜಿ -95), ಫಾರ್ಮಸಿ -156 (ಪಿಜಿ -46+ಯುಜಿ-110), ನರ್ಸಿಂಗ್ -117(ಪಿಜಿ-5+ ಯುಜಿ-112), ಫಿಸಿಯೋಥೆರಪಿ-64 (ಪಿಜಿ-10 + ಯುಜಿ-54), ಅಲೈಡ್ ಹೆಲ್ತ್ ಸಯನ್ಸ್-102 (ಎಮ್‌ಪಿಎಚ್-10+ ಬಿ.ಎಸ್ಸಿ (ಎಮ್‌ಐಟಿ)-30, ಬಿ.ಎಸ್ಸಿ (ಓಟಿಟಿ)-31 ಮತ್ತು ಬಿಎಸ್ಸಿ(ಎಮ್‌ಎಲ್‌ಟಿ-31), ಜರ್ನಲಿಸಂ & ಮಾಸ್ ಕಮ್ಯೂನಿಕೇಷನ್-36, (ಪಿಜಿ-10+ ಯುಜಿ-26), ಬಯಾಲಾಜಿಕಲ್ ಸೈಯನ್ಸ್-59 (ಪಿಜಿ -15+ ಯುಜಿ -44) ಪದವೀಧರರಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X