ನಕಲಿ ಪರವಾನಿಗೆ ಸೃಷ್ಠಿಸಿ ಕಟ್ಟಡ ನಿರ್ಮಾಣ ಆರೋಪ: ದೂರು
ಕುಂದಾಪುರ, ಸೆ.15: ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಯ ನಕಲಿ ಸಹಿ ಇರುವ ಪರವಾನಿಗೆಯ ದಾಖಲೆಯನ್ನು ಸೃಷ್ಠಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಬಾ ಗ್ರಾಮದ ಸರ್ವೇ ನಂಬ್ರ 302/5ಅ3ರಲ್ಲಿನ ಜಾಗದಲ್ಲಿ ಅಕ್ರಮ ವಾಗಿ ಕಟ್ಟಡ ಕಟ್ಟಿದ್ದು, ಈ ಬಗ್ಗೆ ಆನಂದ್ ಖಾರ್ವಿ ಎಂಬವರು ಕುಂದಾಪುರ ಪುರಸಭೆಗೆ ದೂರು ನೀಡಿದ್ದರು.
ಈ ಕುರಿತು ಪುರಸಭೆಯವರು ಪರಿಶೀಲಿಸಿ ದಾಗ ಖಾರ್ವಿಕೇರಿಯ ದಾಸ ಖಾರ್ವಿ ಎಂಬವರು ಪುರಸಭೆ ಮುಖ್ಯಾಧಿಕಾರಿ ಗಳ ಮೊಹರನ್ನು ನಕಲಿಯಾಗಿ ಸೃಷ್ಟಿಸಿ, 2017ರ ಜ.3ರಂದು ಪುರಸಭೆಯ ಮುಖ್ಯಾಧಿಕಾರಿಯವರ ನಕಲಿ ಸಹಿಯಿರುವ ಪರವಾನಿಗೆಯ ದಾಖಲೆಯನ್ನು ಸೃಷ್ಟಿಸಿ ಅಕ್ರಮವಾಗಿ ಕಟ್ಟಡವನ್ನು ಕಟ್ಟಿ ಅಪರಾಧ ಎಸಗಿದ್ದಾರೆ ಎಂದು ಮುಖ್ಯಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
Next Story





