ಬೆಳ್ತಂಗಡಿ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಪರಿಸರ ಸ್ವಚ್ಚತಾ ಕಾರ್ಯಕ್ರಮ

ಬೆಳ್ತಂಗಡಿ: ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ವಿಖಾಯ ಕಾರ್ಯಕರ್ತರಿಂದ ಎಸ್ಕೆಎಸ್ಸೆಸ್ಸೆಫ್ ಪರಪ್ಪು ಶಾಖೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಇರಾ ಸಂಪಿಲ ವತಿಯಿಂದ ಪ್ರಾಥಮಿಕ ಶಾಲೆ ಇರಾ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.
ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಬಾತೀಷ ಶಂಸಿ ಕೊಡ್ಲಿಪೇಟೆ ಪ್ರಾಸ್ತಾವಿಕ ಭಾಷಣ ಮಾಡಿದರು, ದ.ಕ.ಜಿ.ಪಂ ಪ್ರಥಾಮಿಕ ಶಾಲೆ ಇರಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಮುರಳಿಧರ ಭಂಡಾರಿ, ಅಬ್ದುಲ್ಲಾ ಡಿ, ಎಸ್ಕೆಎಸ್ಸೆಸ್ಸೆಫ್ ಪರಪ್ಪು ಸೈಟ್ ಶಾಖೆ ಅಧ್ಯಕ್ಷ ರಫೀಕ್ ಪರಪ್ಪು, ಪ್ರ.ಕಾರ್ಯದರ್ಶಿ ಇಕ್ಬಾಲ್ ಸೈಟ್, ಶಂಸುಲ್ ಉಲಮಾ ಕ್ರಿಯಾ ಸಮಿತಿ ಇರಾ ಅಧ್ಯಕ್ಷ ಎಸ್.ಬಶೀರ್ ಇರಾ, ವಾಮನ ಪೂಜಾರಿ, ಅಶ್ರಫ್ ಇರಾ, ಎಸ್ ಡಿ ಎಂ ಸಿ ಸದಸ್ಯ ಡಿ. ಇಬ್ರಾಹಿಂ, ಹಾಗೂ ರಝ್ಝಾಕ್ ಸೈಟ್ ಮುಂತಾದವರು ಉಪಸ್ಥಿತರಿದ್ದರು. ನಿಯಾಝ್ ಪರಪ್ಪು ಸ್ವಾಗತಿಸಿ, ವಂದಿಸಿದರು










