ಕಡೇಶಿವಾಲಯ: ನೂರುಲ್ ಹುದಾ ಜುಮಾ ಮಸೀದಿಯ ಮಹಾಸಭೆ

ಮುಹಮ್ಮದ್
ಬಂಟ್ವಾಳ, ಸೆ. 15: ಕಡೇಶಿವಾಲಯದ ಕೆಮ್ಮಾನ್ ಕಜೆ ನೂರುಲ್ ಹುದಾ ಜುಮಾ ಮಸೀದಿ ಇದರ ಮಹಾಸಭೆಯು ಶುಕ್ರವಾರ ಮಸೀದಿ ವಠಾರದಲ್ಲಿ ನಡೆಯಿತು.
ಉಜಿರೆಯ ಅಸೈಯದ್ ಜಲಾಲುದ್ದೀನ್ ತಂಙಳ್ ಮಲಜಹ್ ಅವರು ಸಭೆಯ ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮಲ್ ಜಹ್ ತಂಙಳ್, ಅಧ್ಯಕ್ಷರಾಗಿ ಕೆ.ಎಸ್. ಮುಹಮ್ಮದ್ ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ. ಇಸ್ಮಾಯಿಲ್ ಮಠ, ಉಪಾಧ್ಯಕ್ಷರಾಗಿ ಹುಸೈನ್ ವಳಚ್ಚಿಲ್, ಜೊತೆ ಕಾರ್ಯದರ್ಶಿಯಾಗಿ ಇಸಾಕ್ ಕೆಮ್ಮಾನ್, ಕೋಶಾಧಿಕಾರಿಯಾಗಿ ಇಕ್ಬಾಲ್ ಉಜಿರೆ ಹಾಗೂ 8 ಮಂದಿ ಕಾರ್ಯಕಾರಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
Next Story





