ಸೆ.16: ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯಿಂದ ಮುಸಾಅದಃ ಸಂಗಮ
ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮುಸಾಅದಃ ದ.ಕ.ಜಿಲ್ಲಾ ರೇಂಜ್ ಮಟ್ಟದ ಆಹ್ವಾನಿತ ಪ್ರತಿನಿಧಿಗಳ ಸ್ನೇಹ ಸಂಗಮ ಸೆ. 16ರಂದು ಬೆಳಗ್ಗೆ 11 ಗಂಟೆಗೆ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಯ ದುವಾಗೈಯುವರು. ಸಭೆಯನ್ನು ಎಸ್ಕೆಎಸ್ಸೆಸ್ಸೆಫ್ ರಾಜಧ್ಯಕ್ಷ ಅನೀಸ್ ಕೌಸರಿ ಉದ್ಘಾಟಿಸಲ್ಲಿದ್ದು, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಅಲ್ ಹಾಜ್ ಸ್ವದಖತ್ತುಲ್ಲಾ ಫೈಝಿ ವಿಷಯ ಮಂಡಿಸಲ್ಲಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ದಾರಿಮಿ ಮಿತ್ತಬೈಲ್ ದುವಾ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





