ಅಕ್ರಮ ಮರಳು ಸಾಗಾಟ ಆರೋಪ: ಟಿಪ್ಪರ್ ವಶಕ್ಕೆ
ಬಜ್ಪೆ: ಆಕ್ರಮ ಮರಳು ಸಾಗಾಟ ಮಾಡುತ್ತಿದ್ದರೆನ್ನಲಾದ ಟಿಪ್ಪರೊಂದನ್ನು ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಬಜ್ಪೆಯ ಮರವೂರು ಸಮೀಪ ಇಂದು ನಡೆದಿದೆ.
ಬಜ್ಪೆಯ ಮರವೂರು ಸೇತುವೆಯ ಬಳಿ ಪೋಲಿಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಮರಳು ಸಾಗಾಟದ ಟಿಪ್ಪರೊಂದು ರಸ್ತೆಯ ಸಮೀಪ ಬರುತ್ತಿದ್ದಂತೆ ಅನುಮಾನ ಗೊಂಡ ಪೊಲೀಸರು ವಾಹನವನ್ನು ತಡೆದು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಟಿಪ್ಪರ್ ಕಾವೂರು ಕಡೆಯಿಂದ ಬಜ್ಪೆ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಘಟನೆಯ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
Next Story





