ಭಟ್ಕಳ: ಯಾಂತ್ರಿಕ ಬೋಟ್ ಮುಳುಗಡೆ; ಐವರು ಮೀನುಗಾರರ ರಕ್ಷಣೆ

ಭಟ್ಕಳ: ಯಾಂತ್ರಿಕ ಬೋಟ್ ಮುಳುಗಡೆಯಾದ ಪರಿಣಾಮ ಸಮುದ್ರ ಪಾಲಾದ ಐವರು ಮೀನುಗಾರನ್ನು ರಕ್ಷಣೆ ಮಾಡಲಾದ ಘಟನೆ ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಉತ್ತರಕನ್ನಡ ಕರಿಕುಂದಾ ಬಳಿಯ ರಾಘವೇಂದ್ರ ಖಾರ್ವಿ ಎಂಬವರಿಗೆ ಸೇರಿದ ಶ್ರೀ ಲಕ್ಷ್ಮೀವೆಂಕಟೇಶ ಎಂಬ ಹೆಸರಿನ ಯಾಂತ್ರಿಕ ಬೋಟ್ ಮುಳುಗಡೆಯಾಗಿದ್ದು, ಇದರಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಘವೇಂದ್ರ, ಚೇತನ, ಉದಯ ಕುಮಾರ್, ಶನಿಯಾರ, ಸುಬ್ರಹ್ಮಣ್ಯ ರಕ್ಷಣೆಗೊಳಗಾದ ಮೀನುಗಾರರು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಭಟ್ಕಳ ಕರಾವಳಿ ಕಾವಲು ಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story







