ಪಂಕಜ್ಗೆ 22ನೇ ವಿಶ್ವ ಕಿರೀಟ
ಮಾಂಡಲೆ, ಸೆ.15: ಭಾರತ ಸ್ಟಾರ್ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಜಯಿಸಿದ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಏರಿಸಿದ್ದಾರೆ.
34ರ ಹರೆಯದ ಅಡ್ವಾಣಿ ಅವರು ಮ್ಯಾನ್ಮಾರ್ನಲ್ಲಿ ನಡೆದ ಐಬಿಎಸ್ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ತಮ್ಮ ಖಾತೆಗೆ ಇನ್ನೊಂದು ಪ್ರಶಸ್ತಿಯನ್ನು ಜಮೆ ಮಾಡಿದರು.
ಇಂದು ನಡೆದ ಫೈನಲ್ನಲ್ಲಿ ಅಡ್ವಾಣಿ ಅವರು ಮ್ಯಾನ್ಮಾರ್ನ ನಾಯ್ ಥ್ವಾಯೇ ಒ ವಿರುದ್ಧ 6-2 150-ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ಬಾಚಿಕೊಂಡರು. 2014ರಿಂದ ಪ್ರತಿವರ್ಷ ಅಡ್ವಾಣಿ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಾರೆ.ಬಿಲಿಯರ್ಡ್ಸ್ನ ಶಾರ್ಟ್ ಮಾದರಿಯಲ್ಲಿ ಕಳೆದ 6 ವರ್ಷಗಳಲ್ಲಿ 5 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಫಲಿತಾಂಶ
ಪಂಕಜ್ ಅಡ್ವಾಣಿ 6-2 ; 150(145)-4, 151(89)-66, 150(127)-50(50), 7-150(63,62), 151(50)-69(50), 150(150)-0, 133(64)-150(105), 150(74)-75(63)
Next Story