Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಯಡಿಯೂರಪ್ಪನವರೇ, ಈ ಅಧಿಕಾರ ಬೇಕಾಗಿತ್ತೇ?

ಯಡಿಯೂರಪ್ಪನವರೇ, ಈ ಅಧಿಕಾರ ಬೇಕಾಗಿತ್ತೇ?

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ16 Sept 2019 12:08 AM IST
share
ಯಡಿಯೂರಪ್ಪನವರೇ, ಈ ಅಧಿಕಾರ ಬೇಕಾಗಿತ್ತೇ?

ಯಡಿಯೂರಪ್ಪಹಿಂದೆ ಮುಖ್ಯ ಮಂತ್ರಿಯಾಗಿದ್ದಾಗ ಹಲವಾರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರು. ಇನ್ನೂ ಹಲವಾರು ಪ್ರಕರಣಗಳಲ್ಲಿ ಅವರು ವಿಚಾರಣೆ ಎದುರಿಸಬೇಕಾಗಿದೆ. ತಿರುಗಿ ನಿಂತರೆ ಡಿಕೆಶಿ ಪರಿಸ್ಥಿತಿ ಬರಬಾರದೆಂಬ ಆತಂಕವೂ ಇದೆ. ಮನುಷ್ಯ ಒಮ್ಮೆ ನೈತಿಕ ಬಲ ಕಳೆದುಕೊಂಡಾಗ ಎಲ್ಲ ಅಪಮಾನಗಳನ್ನು ಬಾಯಿ ಮುಚ್ಚಿಕೊಂಡು ಸಹಿಸಲೇಬೇಕಾಗುತ್ತದೆ. ಇದು ಅವರ ಇಂದಿನ ಸ್ಥಿತಿ.

ಖರೀದಿ ಮಾಡಲ್ಪಟ್ಟ ಹದಿನೇಳು ಅತೃಪ್ತ ಶಾಸಕರ ಮುಲಾಜಿನಲ್ಲಿ ಸರಕಾರ ರಚಿಸಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎರಡು ತಿಂಗಳಾಗುತ್ತ ಬಂತು. ಆದರೆ ರಾಜ್ಯದಲ್ಲಿ ಸರಕಾರವೊಂದು ಇದೆಯೆಂದು ಅನಿಸುತ್ತಲೇ ಇಲ್ಲ.

ಯಡಿಯೂರಪ್ಪ ಹಠ ಹಿಡಿದು ಸರಕಾರ ರಚಿಸಿ ಮುಖ್ಯಮಂತ್ರಿಯಾದರು. ಅದಕ್ಕಾಗಿ ನೂರಾರು ಕೋಟಿ ರೂಪಾಯಿ ಖರ್ಚಾಯಿತು. ಪ್ರತಿ ಶಾಸಕನಿಗೂ ಪ್ರತ್ಯೇಕ ವಿಮಾನ ವ್ಯವಸ್ಥೆ ಮಾಡಿ ಮುಂಬೈಗೆ ಹೊತ್ತೊಯ್ದು ಅಲ್ಲಿ ತಿಂಗಳಾನುಕಾಲ ಐಷಾರಾಮಿ ಹೊಟೇಲ್‌ನಲ್ಲಿ ಇರಿಸಲಾಯಿತು. ಇತ್ತ ವಿಧಾನ ಸಭೆಯಲ್ಲಿ ಸಮ್ಮಿಶ್ರ ಸರಕಾರದ ರಾಜೀನಾಮೆಗೆ ಪಟ್ಟು ಹಿಡಿಯಲಾಯಿತು. ಹೇಗಾದರೂ ಮಾಡಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಯಡಿಯೂರಪ್ಪನವರ ಆಸೆಗೆ ಮೊದಲು ದಿಲ್ಲಿಯ ದೊರೆಗಳು ಅಡ್ಡಗಾಲು ಹಾಕಿದರು. ಕೊನೆಗೆ ಮುಂದೆ ಬಂದದ್ದನ್ನು ನೀವೇ ಎದುರಿಸಬೇಕೆಂಬ ಶರತ್ತಿನೊಂದಿಗೆ ಸರಕಾರ ರಚಿಸಲು ಅಮಿತ್ ಶಾ ಒಪ್ಪಿಗೆ ನೀಡಿದರು.

ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಹೋಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಉತ್ತರ ಕರ್ನಾಟಕ ಮತ್ತು ಮಲೆನಾಡು ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ ಜಲಪ್ರಳಯ ಉಂಟಾಗಿ ನೂರಾರು ಹಳ್ಳಿಗಳು ಪ್ರವಾಹದ ನೀರಿನಲ್ಲಿ ಮುಳುಗಿದವು. ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ಆಗ ತಾನೇ ಅಧಿಕಾರ ವಹಿಸಿಕೊಂಡಿದ್ದ ಯಡಿಯೂರಪ್ಪನವರು ದಿಕ್ಕು ತೋಚದೆ ತಾವೊಬ್ಬರೇ ರಾಜ್ಯದಲ್ಲಿ ಓಡಾಡಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಂಡರು. ಕಾರಣ ಮಂತ್ರಿ ಮಂಡಲ ರಚಿಸಲು ಬಿಜೆಪಿಯ ದ್ವಿಸದಸ್ಯ ಹೈಕಮಾಂಡ್ ಒಪ್ಪಿಕೊಳ್ಳಲಿಲ್ಲ.

ಇದೀಗ ಯಡಿಯೂರಪ್ಪರಿಗೆ ಭ್ರಮ ನಿರಸನವಾಗಿದೆ. ಯಾಕಾದರೂ ಅಧಿಕಾರಕ್ಕೆ ವಹಿಸಿಕೊಂಡೆನೊ ಎಂಬ ಸ್ಥಿತಿಯಲ್ಲಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತವೆ.

ಒಂದೆಡೆ ಪ್ರವಾಹದಲ್ಲಿ ಬೀದಿಗೆ ಬಿದ್ದವರಿಗೆ ನೆಲೆ ಕಲ್ಪಿಸಲು ಈವರೆಗೆ ಸಾಧ್ಯವಾಗಿಲ್ಲ. ಇನ್ನೊಂದೆಡೆ ತಮ್ಮನ್ನು ಅತಂತ್ರ ಸ್ಥಿತಿಯಿಂದ ಪಾರು ಮಾಡುವಂತೆ ಅತೃಪ್ತರ ಕಾಟ, ಮತ್ತೊಂದೆಡೆ ಸಂಘಪರಿವಾರದ ಸಂತೋಷ ಗ್ಯಾಂಗಿನ ಕಿರಿ ಕಿರಿ. ಹೀಗಾಗಿ ಯಡಿಯೂರಪ್ಪರಿಗೆ ಸಾಕಪ್ಪಾ ಸಾಕು ಎನಿಸಿದೆ. ಇದರಲ್ಲಿ ಅವರ ತಪ್ಪು ಸಾಕಷ್ಟಿದೆ. ಬಹುಮತವಿಲ್ಲದಿದ್ದರೂ ಆಪರೇಶನ್ ಕಮಲದ ಮೂಲಕ ಸರಕಾರ ರಚಿಸಲು ಮುಂದಾದರು. ಸ್ಪೀಕರ್ ರಮೇಶ್‌ಕುಮಾರ್ ಅತೃಪ್ತರನ್ನು ಅನರ್ಹಗೊಳಿಸಿದಾಗ ಅವರಿಗೆ ಹುಸಿ ಧೈರ್ಯ ತುಂಬಿದ ಯಡಿಯೂರಪ್ಪ, ‘ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಅಮಿತ್ ಶಾ, ಮೋದಿ ಸೇರಿ ಮ್ಯಾನೇಜ್ ಮಾಡುತ್ತಾರೆ. ಹೆದರಬೇಡಿ’ ಎಂದು ಬೂಸಿ ಬಿಟ್ಟರು. ಇದನ್ನು ನಂಬಿದ ನವ ಸಾಕ್ಷರ ಅತೃಪ್ತರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತ ಶಿರಡಿ ಸೇರಿದಂತೆ ಮಹಾರಾಷ್ಟ್ರದ ಯಾತ್ರಾ ಸ್ಥಳಗಳಿಗೆ ವಿಮಾನದಲ್ಲಿ ಹಾರಾಡತೊಡಗಿದರು. ಇದೆಲ್ಲ ಮುಗಿದು ಸರಕಾರ ರಚನೆಯಾದ ನಂತರ ಅವರನ್ನು ಮಾತಾಡಿಸುವವರೇ ಇಲ್ಲ.

ಮತ್ತೊಂದೆಡೆ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಯಡಿಯೂರಪ್ಪ ಅನೈತಿಕ ಮಾರ್ಗ ಹಿಡಿದರು. ಒಬ್ಬೊಬ್ಬ ಶಾಸಕನಿಗೆ ಐವತ್ತು ಕೋಟಿ ರೂಪಾಯಿ ಆಮಿಷವೊಡ್ಡಿದರಂತೆ. ಅದರ ಸಿಡಿಯೂ ಹೊರಬಿತ್ತು ಹಾಗೇ ಮುಚ್ಚಿ ಹೋಯಿತು. ಈಗ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ನ ಜೆಡಿಎಸ್ ಶಾಸಕನ ಪುತ್ರ ಶರಣಗೌಡ, ‘ಆಪರೇಶನ್ ಕಮಲದ ಆಡಿಯೊ ಪ್ರಕರಣ ರೀ ಓಪನ್ ಮಾಡಲು ಬಿಜೆಪಿ ನಾಯಕರು ನನಗೆ ದುಂಬಾಲು ಬಿದ್ದಿದ್ದಾರೆ’ ಎಂದಿದ್ದಾರೆ.

ಅದೇನೇ ಆಗಲಿ, ಅತ್ತೂ ಕರೆದು ಮುಖ್ಯಮಂತ್ರಿಯಾದ ಯಡಿಯೂರಪ್ಪ ನೆಮ್ಮದಿಯಾಗಿದ್ದಾರಾ? ಅದೂ ಇಲ್ಲ, ಅವರು ಪ್ರತಿಯೊಂದಕ್ಕೂ ದಿಲ್ಲಿಗೆ ಹೋಗಿ ಬಾಸ್‌ಗಳಿಬ್ಬರ ಅನುಮತಿ ಪಡೆದು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸಚಿವ ಸಂಪುಟ ರಚಿಸುವ ಪರಮಾಧಿಕಾರ ಮುಖ್ಯಮಂತ್ರಿಗಳಿಗಿದೆ . ಆದರೆ ಯಡಿಯೂರಪ್ಪರ ಪಾಲಿಗೆ ಅದಿಲ್ಲ. ದಿಲ್ಲಿ ದೊರೆಗಳ ಅಪ್ಪಣೆ ಇಲ್ಲದೆ ಒಂದು ಕಡ್ಡಿಯೂ ಅಲುಗಾಡುವಂತಿಲ್ಲ. ಹೀಗಾಗಿ ಕಾಡಿ, ಬೇಡಿದ ನಂತರ ಸಂಪುಟ ರಚನೆಗೆ ಅವಕಾಶ ಸಿಕ್ಕಿತು. ಅದೂ ಯಡಿಯೂರಪ್ಪರಿಗೆ ಬೇಕಾದವರಿಗೆ ಸಂಪುಟ ಸೇರಲು ಅವಕಾಶವೇ ನೀಡಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗುವುದು ಯಡಿಯೂರಪ್ಪರಿಗೆ ಗೊತ್ತಿರಲಿಲ್ಲ. ಒಮ್ಮೆಲೇ ಅವರ ಹೆಸರು ಬಂದಾಗ ದಿಲ್ಲಿಯ ದೊರೆಗಳಿಗೆ ಫೋನ್ ಹಚ್ಚಿದರು. ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಸಿಎಂ ಮಾತಿಗೆ ಕ್ಯಾರೆ ಅನ್ನದ ದಿಲ್ಲಿ ದೊರೆಗಳು, ‘ಸುಮ್ಮನೆ ನಾವು ಹೇಳಿದ್ದನ್ನು ಮಾಡಿ. ನಮಗೆಲ್ಲ ಗೊತ್ತಿದೆ’ ಎಂದು ದಬಾಯಿಸಿದರು.

ಸಂಪುಟ ರಚನೆಯಾದ ನಂತರ ಸಚಿವ ಖಾತೆಯನ್ನು ಯಾರ್ಯಾರಿಗೆ ಕೊಡಬೇಕೆಂದು ಕೇಳಲು ಯಡಿಯೂರಪ್ಪಮತ್ತೆ ದಿಲ್ಲಿಗೆ ಹಾರಬೇಕಾಯಿತು. ಆಗಲೂ ಅವರ ಮಾತು ನಡೆಯಲಿಲ್ಲ. ದಿಲ್ಲಿ ದೊರೆಗಳೇ ಯಾರ್ಯಾರಿಗೆ ಯಾವ ಸಚಿವ ಖಾತೆ ಎಂದು ತಾವೇ ತೀರ್ಮಾನಿಸಿ ಪಟ್ಟಿ ನೀಡಿದರು. ಅದನ್ನು ಮುಖ್ಯಮಂತ್ರಿ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ಮೂವರು ಉಪ ಮುಖ್ಯ ಮಂತ್ರಿಗಳ ಆಯ್ಕೆಯಲ್ಲೂ ಅವರ ಮಾತು ನಡೆಯಲಿಲ್ಲ. ಕೊನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೂ ಯಡಿಯೂರಪ್ಪ ಸೂಚಿಸಿದ ವ್ಯಕ್ತಿ ಅಧ್ಯಕ್ಷನಾಗಲಿಲ್ಲ. ನಳಿನ್‌ಕುಮಾರ್ ಕಟೀಲು ಅವರ ಆಯ್ಕೆಯಾಗಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಹದಿಂದ ಬೀದಿಗೆ ಬಿದ್ದ ಕರ್ನಾಟಕದ ಜನರ ನೆರವಿಗೆ ಯಡಿಯೂರಪ್ಪಪದೇ ಪದೇ ಮನವಿ ಮಾಡಿದರೂ ಕೇಂದ್ರದಿಂದ ಬಿಡಿಗಾಸೂ ಬರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಐದು ಸಲ ಯತ್ನಿಸಿ ಮನವಿ ಮಾಡಿದರೂ ಭೇಟಿಯ ಅವಕಾಶ ಸಿಗಲಿಲ್ಲ. ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದಾಗಲೂ ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರಕಾರ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ತಾತ್ಕಾಲಿಕ ಪರಿಹಾರ ನೀಡಿದರೂ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಯಿತು. ಕೊನೆಗೆ ಹತಾಶರಾದ ಯಡಿಯೂರಪ್ಪ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಬೇಕಾಗಿ ಬಂತು. ನಮ್ಮ ಇಬ್ಬರು ಬಿಜೆಪಿ ಸಂಸದರು ಕನ್ನಡ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಒಂದಿಷ್ಟು ಹಣ ಗೆದ್ದುಕೊಂಡು ಬಂದು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಬೇಕಾದ ಪರಿಸ್ಥಿತಿ ಬಂತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಹೋಯಿತು. ಗೃಹಸಚಿವ ಅಮಿತ್ ಶಾ ಬಂದು ಹೋದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ಆದರೆ ಕೇಂದ್ರದಿಂದ ಒಂದೇ ಒಂದು ಪೈಸೆ ಬಿಡುಗಡೆ ಆಗಲಿಲ್ಲ. ಹಿಂದೆ ಕೊಡಬೇಕಾಗಿದ್ದ ಬರ ಪರಿಹಾರದ ಮೊತ್ತ ಬಿಡುಗಡೆ ಮಾಡಿ ಕೈ ತೊಳೆದುಕೊಂಡರು.

ಹಿಂದೆ 2009 ರಲ್ಲಿ ಇದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂಥದೇ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದ್ದರು. ಆದರೆ ಈ ಬಾರಿ ಅದಕ್ಕಿಂತ ಭೀಕರ ಜಲಪ್ರಳಯ ಉಂಟಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಬಂದು ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಪರಿಹಾರ ಘೋಷಿಸಲಿಲ್ಲ. ಚಂದ್ರಯಾನ ನೋಡಲು ರಾತ್ರೋರಾತ್ರಿ ಬೆಂಗಳೂರಿಗೆ ಬಂದು ಹಾಗೇ ಹೋದರು. ಆಗ ಪ್ರವಾಹದ ಬಗ್ಗೆ ಹೇಳಲು ಹೋಗಿದ್ದ ಮುಖ್ಯಮಂತ್ರಿಗೆ ಮಾತಾಡಲೂ ಬಿಡಲಿಲ್ಲ.

ಸಚಿವ ಸಂಪುಟ ರಚಿಸಲೂ ಕಿರಿಕಿರಿ, ಸಚಿವ ಖಾತೆ ಹಂಚಿಕೆ ಮಾಡಲು ಅಡ್ಡಗಾಲು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಿಡಿಗಾಸು ನೀಡದಿರುವ ಅಸಹಕಾರ. ಹೀಗಾಗಿ ದಿಲ್ಲಿಗೆ ಓಡಾಡಿ ಯಡಿಯೂರಪ್ಪಸುಸ್ತಾಗಿ ಹೋಗಿದ್ದಾರೆ. ಅವರು ಹೆಸರಿಗೆ ಮುಖ್ಯಮಂತ್ರಿ. ಸರಕಾರದಲ್ಲಿ ಅವರ ಮಾತು ನಡೆಯುತ್ತಿಲ್ಲ. ಸಂವಿಧಾನೇತರ ಅಧಿಕಾರ ಕೇಂದ್ರವೊಂದು ತನ್ನಿಷ್ಟದಂತೆ ಸಂತೋಷವಾಗಿ ಸರಕಾರವನ್ನು ನಿಯಂತ್ರಿಸುತ್ತಿದೆ.

ಯಡಿಯೂರಪ್ಪ ತನಗೆ ಸವಾಲಾಗಬಲ್ಲ ಇನ್ನೊಂದು ಅಧಿಕಾರ ಕೇಂದ್ರವನ್ನು ಅಂದರೆ ಉಪ ಮುಖ್ಯಮಂತ್ರಿಯವರ ನೇಮಕವನ್ನು ಬಯಸಿರಲಿಲ್ಲ. ಬಿಜೆಪಿ ಹೈಕಮಾಂಡ್ ಬಲವಂತವಾಗಿ ಮೂವರು ಡಿಸಿಎಂಗಳನ್ನು ಅವರ ತಲೆಯ ಮೇಲೆ ಕೂರಿಸಿತು. ಆ ಮೂವರು ಕೂಡ ಯಡಿಯೂರಪ್ಪರ ಆಯ್ಕೆಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಲಿಂಬಾವಳಿಯವರನ್ನು ತರಲು ಯಡಿಯೂರಪ್ಪಹರ ಸಾಹಸ ಮಾಡಿದರು. ಆದರೆ ಅಮಿತ್ ಶಾ, ಸಂತೋಷ ಸೇರಿ ಕಟೀಲರನ್ನು ನೇಮಕ ಮಾಡಿದರು. ತಮ್ಮ ಮಗ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಯಡಿಯೂರಪ್ಪನವರ ಆಸೆಯೂ ಈಡೇರಲಿಲ್ಲ. ಹೀಗಾಗಿ ಯಡಿಯೂರಪ್ಪನಿರಂತರವಾಗಿ ಆದ ಅವಮಾನದಿಂದ ಕುದಿಯುತ್ತಿದ್ದಾರೆ.

ಯಡಿಯೂರಪ್ಪಹಿಂದೆ ಮುಖ್ಯ ಮಂತ್ರಿಯಾಗಿದ್ದಾಗ ಹಲವಾರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರು. ಇನ್ನೂ ಹಲವಾರು ಪ್ರಕರಣಗಳಲ್ಲಿ ಅವರು ವಿಚಾರಣೆ ಎದುರಿಸಬೇಕಾಗಿದೆ. ತಿರುಗಿ ನಿಂತರೆ ಡಿಕೆಶಿ ಪರಿಸ್ಥಿತಿ ಬರಬಾರದೆಂಬ ಆತಂಕವೂ ಇದೆ. ಮನುಷ್ಯ ಒಮ್ಮೆ ನೈತಿಕ ಬಲ ಕಳೆದುಕೊಂಡಾಗ ಎಲ್ಲ ಅಪಮಾನಗಳನ್ನು ಬಾಯಿ ಮುಚ್ಚಿಕೊಂಡು ಸಹಿಸಲೇಬೇಕಾಗುತ್ತದೆ. ಇದು ಅವರ ಇಂದಿನ ಸ್ಥಿತಿ.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಪಲ್ಲಟಗೊಳಿಸುವ ಮಸಲತ್ತುಗಳು ಬಿಜೆಪಿಯಲ್ಲಿ ಒಳಗೊಳಗೇ ನಡೆಯುತ್ತಿವೆ. ಸಂಘಪರಿವಾರ ಹಸಿರು ನಿಶಾನೆ ಬೀಸಿದರೆ, ದಿಲ್ಲಿ ದೊರೆಗಳು ಮನಸ್ಸು ಮಾಡಿದರೇ ಯಾವುದೂ ಅನಿರೀಕ್ಷಿತವಲ್ಲ. ಅಂತಲೇ ಅವರಿಗೆ ಪರ್ಯಾಯವಾಗಿ ಸವದಿಯವರನ್ನು ತರಲಾಗಿದೆ. ರಾಜ್ಯ ರಾಜಕಾರಣದಲ್ಲಿ ಬರಲಿರುವ ದಿನಗಳು ಕುತೂಹಲಕಾರಿಯಾಗಿವೆ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X