ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭೆ

ಮಂಗಳೂರು, ಸೆ.16: ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 29ನೆ ವಾರ್ಷಿಕ ಸಭೆಯು ಬಂದರ್‌ನ ಮುಸ್ಲಿಂ ಸೆಂಟ್ರಲ್ ಕಮಿಟಿಯ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು. ಸೊಸೈಟಿಯ ಅಧ್ಯಕ್ಷ ಹಾಜಿ ಬಿ. ಇಬ್ರಾಹೀಂ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎಂ. ಕುದ್ರೋಳಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶೆರಿನ್ ಬಾನು ವರದಿ ವಾಚಿಸಿದರು. ಈ ಸಂದರ್ಭ ಶೇ.9 ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ನಿರ್ದೇಶಕರಾದ ಹಾಜಿ ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಎಂ., ಮುನೀರ್ ಅಹ್ಮದ್, ನಿಸಾರ್ ಫಕೀರ್ ಮುಹಮ್ಮದ್, ಎನ್.ಪಿ. ಪುಷ್ಪರಾಜನ್, ನೂರ್ ಅಮೀನ್, ಶಾಹಿದಾ, ರತ್ನಾಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.
Next Story





