Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹೃದಯದ ಟ್ಯೂಮರ್‌ಗಳ ಬಗ್ಗೆ ನಿಮಗೆ...

ಹೃದಯದ ಟ್ಯೂಮರ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕಾದ ಮಾಹಿತಿಯಿಲ್ಲಿದೆ

ವಾರ್ತಾಭಾರತಿವಾರ್ತಾಭಾರತಿ17 Sept 2019 10:50 PM IST
share
ಹೃದಯದ ಟ್ಯೂಮರ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕಾದ ಮಾಹಿತಿಯಿಲ್ಲಿದೆ

ಟ್ಯೂಮರ್ ಅಥವಾ ಗಡ್ಡೆಯು ಶರೀರದಲ್ಲಿ ಬೇಡದ ಜಾಗದಲ್ಲಿ ಉಂಟಾಗುವ ಅಂಗಾಂಶದ ಅಸಹಜ ಬೆಳವಣಿಗೆಯಾಗಿದೆ. ಅದು ಕ್ಯಾನ್ಸರ್‌ಆಗಿರಬಹುದು ಅಥವಾ ಕ್ಯಾನ್ಸರ್ ಅಲ್ಲದಿರಬಹುದು. ಹೃದಯದ ಕವಾಟಗಳಲ್ಲಿ ಇಂತಹ ಅಸಹಜ ಬೆಳವಣಿಗೆಯನ್ನು ಹೃದಯದ ಟ್ಯೂಮರ್ ಎಂದು ಕರೆಯಲಾಗುತ್ತದೆ. ಹೃದಯದ ಗಡ್ಡೆಗಳಲ್ಲಿ ಪೈಮರಿ ಅಥವಾ ಪ್ರಾಥಮಿಕ ಮತ್ತು ಮೆಟಾಸ್ಟಾಟಿಕ್ ಅಥವಾ ಸ್ಥಾನಾಂತರಿತ ಹೀಗೆ ಎರಡು ವಿಧಗಳಿವೆ.

ಸೆಕೆಂಡರಿ ಹೃದಯ ಟ್ಯೂಮರ್‌ಗೆ ಹೋಲಿಸಿದರೆ ಪ್ರೈಮರಿ ಟ್ಯೂಮರ್‌ಗಳು ಅಪರೂಪಕ್ಕೆ ಉಂಟಾಗುತ್ತವೆ. ಪ್ರೈಮರಿ ಟ್ಯೂಮರ್‌ಗಳು ಹೃದಯದಲ್ಲಿಯೇ ಬೆಳೆಯುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಮೈಕ್ಸೋಮಾ ಅತ್ಯಂತ ಸಾಮಾನ್ಯ ವಿಧದ ಇಂತಹ ಟ್ಯೂಮರ್ ಆಗಿದೆ.

ಮೆಟಾಸ್ಟಾಟಿಕ್ ಟ್ಯೂಮರ್ ಶರೀರದ ಇತರ ಅಂಗಾಂಗಗಳಲ್ಲಿ,ಸಾಮಾನ್ಯವಾಗಿ ಮೂತ್ರಪಿಂಡ,ಸ್ತನ,ಚರ್ಮ ಅಥವಾಶ್ವಾಸಕೋಶಗಳಲ್ಲಿ ಆರಂಭಗೊಂಡು ನಂತರ ಹೃದಯಕ್ಕೆ ಹರಡುವ ಗಡ್ಡೆಯಾಗಿದೆ. ಎಲ್ಲ ಮೆಟಾಸ್ಟಾಟಿಕ್ ಟ್ಯೂಮರ್‌ಗಳು ಕ್ಯಾನ್ಸರ್ ಗಡ್ಡೆಗಳಾಗಿದ್ದು,ಪ್ರೈಮರಿ ಟ್ಯೂಮರ್‌ಗಿಂತ ಹೆಚ್ಚು ಸಾಮಾನ್ಯವಾಗಿವೆ.

 ಹೃದಯದ ಟ್ಯೂಮರ್‌ನ್ನು ಸೂಚಿಸುವ ಯಾವುದೇ ನಿರ್ದಿಷ್ಟ ಲಕ್ಷಣಗಳಿರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ರೋಗಿಯ ಸ್ಥಿತಿಯನ್ನು ಅವಲಂಬಿಸಿ ಸೌಮ್ಯ ಅಥವಾ ತೀವ್ರ ಸ್ವರೂಪದ ಲಕ್ಷಣಗಳಿರಬಹುದು. ಈ ಲಕ್ಷಣಗಳು ಇತರ ಹೃದ್ರೋಗಗಳ ಲಕ್ಷಣಗಳೇ ಆಗಿರುತ್ತವೆ.

 ಉಸಿರಾಟದ ತೊಂದರೆ,ಅಸಹಜ ಹೃದಯ ಬಡಿತ,ತೀರ ಕಡಿಮೆ ರಕ್ತದೊತ್ತಡ,ಎದೆನೋವು,ತಲೆ ಸುತ್ತುವಿಕೆ ಮತ್ತು ಬಳಲಿಕೆ ಇವು ಹೃದಯದ ಗಡ್ಡೆಯ ಪ್ರಮುಖ ಲಕ್ಷಣಗಳಾಗಿದ್ದರೆ,ಕಾರಣವಿಲ್ಲದೆ ದೇಹತೂಕ ಇಳಿಕೆ,ಕೀಲುಗಳಲ್ಲಿ ನೋವು,ಊದಿಕೊಂಡ ಕಾಲುಗಳು ಮತ್ತು ಹೊಟ್ಟೆ,ಜ್ವರ ಅಥವಾ ಕೆಮ್ಮು,ಚರ್ಮದ ಮೇಲೆ ಸಣ್ಣ ಕೆಂಪು ಗುಳ್ಳೆಗಳು ಇವು ಕೆಲವು ಕಿರು ಲಕ್ಷಣಗಳಾಗಿವೆ.

ಹೃದಯದ ಟ್ಯೂಮರ್‌ನಿಂದ ಬಳಲುತ್ತಿರುವ ಶೇ.10ರಷ್ಟು ರೋಗಿಗಳು ಈ ಕಾಯಿಲೆಯ ಕೌಟುಂಬಿಕ ಇತಿಹಾಸವನ್ನು ಹೊಂದಿರುತ್ತಾರೆ. ಕಾಯಿಲೆಯ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಆದರೆ ಸಾಮಾನ್ಯವಾಗಿ ಟ್ಯೂಮರ್‌ಗೆ ಕಾರಣವಾಗುವ ಶರೀರದಲ್ಲಿಯ ಜೀವಕೋಶಗಳ ಅಸಹಜ ಬೆಳವಣಿಗೆಯನ್ನು ಗುರುತಿಸುವಲ್ಲಿ ಮತ್ತು ನಿರ್ಮೂಲನಗೊಳಿಸುವಲ್ಲಿ ರೋಗ ನಿರೋಧಕ ಶಕ್ತಿಯ ಅಸಾಮರ್ಥ್ಯ ಇದಕ್ಕೆ ಕಾರಣವೆಂದು ಭಾವಿಸಲಾಗಿದೆ. ವಿಕಿರಣ, ಕೆಲವು ವೈರಸ್‌ಗಳು,ತಂಬಾಕು,ನಿಕೋಟಿನ್,ಬೆಂಝೀನ್ ಮತ್ತು ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಇವು ಹೃದಯದಲ್ಲಿ ಗಡ್ಡೆಯನ್ನುಂಟು ಮಾಡಬಹುದಾದ ಇತರ ಕಾರಣಗಳಾಗಿವೆ.

 ಹೃದಯದ ಗಡ್ಡೆಗಳು ಅಪರೂಪವಾಗಿರುವುದರಿಂದ ಮತ್ತು ಅವುಗಳ ಲಕ್ಷಣಗಳು ಇತರ ಹೃದ್ರೋಗಗಳ ಲಕ್ಷಣಗಳನ್ನೇ ಹೋಲುವುದರಿಂದ ಅವುಗಳನ್ನು ಪತ್ತೆ ಹಚ್ಚುವುದು ಸುಲಭವಲ್ಲ. ಹೃದಯದಲ್ಲಿ ಅಸಹಜ ಶಬ್ದಗಳು,ಅನಿಯಮಿತ ಹೃದಯ ಬಡಿತ ದರ ಮತ್ತು ಹೃದಯ ವೈಫಲ್ಯದ ಅವಿವರಣೀಯ ಲಕ್ಷಣಗಳಿಂದ ನರಳುತ್ತಿರುವ ವ್ಯಕ್ತಿಯನ್ನು ಸಮಗ್ರ ತಪಾಸಣೆಗೊಳಪಡಿಸುವ ಮೂಲಕ ಪ್ರೈಮರಿ ಟ್ಯೂಮರ್‌ನ್ನು ಗುರುತಿಸಬಹುದಾಗಿದೆ.

ಶರೀರದ ಇತರ ಯಾವುದಾದರೂ ಭಾಗದಲ್ಲಿ ಟ್ಯೂಮರ್ ಉಂಟಾಗಿರುವ ವ್ಯಕ್ತಿಯು ಹೃದಯ ವೈಫಲ್ಯದ ಲಕ್ಷಣಗಳನ್ನು ಪ್ರಕಟಿಸಲು ಆರಂಭಿಸಿದರೆ ಆಗ ಮೆಟಾಸ್ಟಾಟಿಕ್ ಟ್ಯೂಮರ್‌ಗಾಗಿ ತಪಾಸಣೆಗಳಿಗೆ ಒಳಗಾಗಬೇಕಾಗುತ್ತದೆ. ವೈದ್ಯರು ಎದೆಯ ಎಕ್ಸ್-ರೇ,ಎಕೊಕಾರ್ಡಿಯಾಗ್ರಾಮ್,ಕಾರ್ಡಿಯಾಕ್ ಕ್ಯಾಥೆಟರೈಸೇಷನ್,ಹೃದಯದ ಎಂಆರ್‌ಐ,ಕೊರೊನರಿ ಆ್ಯಂಜಿಯೊಗ್ರಫಿ,ರಕ್ತ ಪರೀಕ್ಷೆಗಳು,ಟೊಮೊಗ್ರಫಿ ಮತ್ತು ಎಲೆಕ್ಟ್ರೋಕಾರ್ಡಿಯಾಗ್ರಾಮ್ ಪರೀಕ್ಷೆಗಳ ಪೈಕಿ ಒಂದನ್ನು ಅಥವಾ ಹೆಚ್ಚಿನದನ್ನು ನಡೆಸಬಹುದು.

ಕುಟುಂಬದ ಇತಿಹಾಸ,ವಯಸ್ಸು ಅಥವಾ ಲಿಂಗದಂತಹ ಈ ರೋಗದ ಕೆಲವು ಅಪಾಯದ ಅಂಶಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ರೋಗಿಯು ಇದು ತನ್ನ ಹಣೆಬರಹ ಎಂದುಕೊಂಡು ಅದರೊಂದಿಗೆ ಬದುಕಬೇಕು ಎಂದು ಇದರ ಅರ್ಥವಲ್ಲ. ಹೃದಯದ ಟ್ಯೂಮರ್‌ನ ಅಪಾಯವನ್ನು ತಗ್ಗಿಸಲು ಕೆಲವು ಮಾರ್ಗಗಳಿವೆ.

► ಧೂಮಪಾನ ವರ್ಜನ:

ಧೂಮ್ರಪಾನವು ಹೃದ್ರೋಗಗಳಿಗೆ ಅತ್ಯಂತ ಪ್ರಮುಖ ಕಾರಣಗಳಲ್ಲೊಂದಾಗಿದೆ. ಸಿಗರೇಟ್‌ಗಳಲ್ಲಿರುವ ನಿಕೋಟಿನ್ ಹೃದಯದ ಕವಾಟಗಳಿಗೆ ಹಾನಿಯನ್ನುಂಟು ಮಾಡಬಹುದು ಮತ್ತು ಅಪಧಮನಿಗಳ ಸುತ್ತ ಪಾಚಿ ಸಂಗ್ರಹಗೊಳ್ಳಲು ಅವಕಾಶವನ್ನುಂಟು ಮಾಡಬಹುದು. ಇದು ಹೃದಯದ ಟ್ಯೂಮರ್‌ಗೆ ಕಾರಣವಾಗುತ್ತದೆ. ಧೂಮ್ರಪಾನವನ್ನು ವರ್ಜಿಸುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

► ನಿಯಮಿತ ವ್ಯಾಯಾಮ:

ನಿಯಮಿತ ವ್ಯಾಯಾಮವು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಆರೋಗ್ಯಕರ ಆಹಾರ ಸೇವನೆ,ಆರೋಗ್ಯಕರ ದೇಹತೂಕ ಕಾಯ್ದುಕೊಳ್ಳುವಿಕೆ ಮತ್ತು ಯಾವುದಾದರೂ ದೈಹಿಕ ಚಟುವಟಿಕೆಗಳ ಮೂಲಕ ಅಪಾಯದಿಂದ ದೂರವಿರಬಹುದಾಗಿದೆ.

► ಮದ್ಯಪಾನ ಬೇಡ:

ಅತಿಯಾದ ಮದ್ಯಪಾನ ಚಟ ಆರೋಗ್ಯಕ್ಕೆ ತುಂಬ ದುಬಾರಿಯಾಗುತ್ತದೆ. ಗಡ್ಡೆಗಳು ಸೇರಿದಂತೆ ಹೃದ್ರೋಗಗಳಿಂದ ದೂರವುಳಿಯಬೇಕೆಂದರೆ ಈ ಚಟವನ್ನು ಬಿಡುವುದು ಅಗತ್ಯವಾಗುತ್ತದೆ.

► ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದು ಬೇಡ:

ಸೂರ್ಯನ ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಹೃದಯದಲ್ಲಿ ಟ್ಯೂಮರ್ ಬೆಳೆಯುವ ಅಪಾಯವನ್ನು ಹೆಚ್ಚಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X