ಉಡುಪಿ: ಉಚಿತ ವಾಹನ ಹೊಗೆ ತಪಾಸಣೆ ಕಾರ್ಯಕ್ರಮ

ಉಡುಪಿ, ಸೆ.18: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಜಯಂಟ್ಸ್ ಸಪ್ತಾಹದ ಅಂಗವಾಗಿ ಕಾರು ಮತ್ತು ಬೈಕ್‌ಗಳ ಉಚಿತ ಹೊಗೆ ತಪಾಸಣೆ ಕಾರ್ಯಕ್ರಮವನ್ನು ಮಂಗಳವಾರ ಇಂದ್ರಾಳಿಯ ಶ್ರೀಕೃಷ್ಣ ಪೆಟ್ರೋಲಿ ಯಂನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್ ಮಾತನಾಡಿ, ಪರಿಸರ ರಕ್ಷಣೆ ನಮ್ಮಲ್ಲರ ಹೊಣೆಯಾಗಿದ್ದು ಈ ನಿಟ್ಟಿನಲ್ಲಿ ವಾಹನಗಳ ಉಚಿತ ಹೊಗೆ ತಪಾಸಣೆಯ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಲಾಗುತ್ತಿದೆ. ವಾಹನ ತಪಾಸಣೆಯ ಸಂದರ್ಭದಲ್ಲಿ ಹೊಗೆ ತಪಾಸಣೆಯ ಪತ್ರ ಬಹುಮುಖ್ಯವಾಗಿದ್ದು, ಸಾರ್ವಜನಿಕರಿಗೆ ದಂಡ ದಿಂದ ಪಾರಾಗಲು ಉಚಿತ ಹೊಗೆ ತಪಾಸಣೆಯ ಮೂಲಕ ಸಮಾಜದ ಸೇವೆ ಮಾಡಲಾಗುತ್ತಿದೆ ಎಂದರು.
ಜಯಂಟ್ಸ್ ಯುನಿಟ್ ನಿರ್ದೇಶಕ ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್, ಉಪಾಧ್ಯಕ್ಷ ಇಕ್ಬಾಲ್ ಮನ್ನಾ, ಕಾರ್ಯದರ್ಶಿ ಯಶವಂತ ಸಾಲಿಯಾನ್, ನಿಕಟಪೂರ್ವ ಅಧ್ಯಕ್ಷ ಆನಂದ ಉದ್ಯಾವರ್, ಪೂರ್ವಾಧ್ಯಕ್ಷರುಗಳಾದ ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ, ಉಷಾ ರಮೇಶ್, ದೇವದಾಸ್ ಕಾಮತ್ ಉಪಸ್ಥಿತರಿದ್ದರು. ಉಡುಪಿಯ ನೂರಾರು ನಾಗರಿಕರು ಈ ಉಚಿತ ಪರಿಸರ ಸ್ನೇಹಿ ಕಾರ್ುಕ್ರಮದ ಪ್ರಯೋಜನ ಪಡೆದರು.





