Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಎಚ್ಚರಿಕೆ, ಆ್ಯಂಟಿಬಯಾಟಿಕ್‌ಗಳು ಹೃದಯ...

ಎಚ್ಚರಿಕೆ, ಆ್ಯಂಟಿಬಯಾಟಿಕ್‌ಗಳು ಹೃದಯ ಸಮಸ್ಯೆಗಳಿಗೆ ಕಾರಣವಾಗಬಲ್ಲವು

ವಾರ್ತಾಭಾರತಿವಾರ್ತಾಭಾರತಿ18 Sept 2019 10:11 PM IST
share
ಎಚ್ಚರಿಕೆ, ಆ್ಯಂಟಿಬಯಾಟಿಕ್‌ಗಳು ಹೃದಯ ಸಮಸ್ಯೆಗಳಿಗೆ ಕಾರಣವಾಗಬಲ್ಲವು

 ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯರು ಆ್ಯಂಟಿಬಯಾಟಿಕ್‌ಗಳು ಅಥವಾ ಪ್ರತಿಜೀವಕಗಳ ಸೇವನೆಯನ್ನು ಶಿಫಾರಸು ಮಾಡುವುದು ಸಾಮಾನ್ಯ. ಅಲ್ಲದೆ ಹೆಚ್ಚಿನವರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸ್ವಯಂ ವೈದ್ಯರಾಗಿ ಔಷಧಿ ಅಂಗಡಿಗಳಿಂದ ಆ್ಯಂಟಿಬಯಾಟಿಕ್‌ಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಇದು ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲದು.

ಆ್ಯಂಟಿಬಯಾಟಿಕ್‌ಗಳಿಗೆ ಸಂಬಂಧಿಸಿದಂತೆ ಚರ್ಚೆಗಳಿಗೆ ಕೊನೆಯೇ ಇಲ್ಲ. ಯಾವುದೇ ಸೋಂಕು ಹೆಚ್ಚುವುದನ್ನು ತಡೆಯಲು ಆ್ಯಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುವುದು ಉತ್ತಮ ಎಂದು ಕೆಲವರು ವಾದಿಸಿದರೆ,ಇನ್ನು ಹಲವರು ಆರೋಗ್ಯ ಸಮಸ್ಯೆಗಳಿಗೆ ಆ್ಯಂಟಿಬಯಾಟಿಕ್‌ಗಳ ಸೇವನೆಯನ್ನು ಉತ್ತೇಜಿಸಬಾರದು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಯಾವುದೇ ಕಾಯಿಲೆಗೆ ಯಾವುದೇ ಔಷಧಿಯನ್ನು ಸೇವಿಸುವ ಮುನ್ನ ರೋಗಿಯು ಅಗತ್ಯವಾಗಿ ತನ್ನ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಯಾವುದೇ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಶರೀರದಲ್ಲಿ ಅದಕ್ಕೆ ಪ್ರತಿರೋಧಕ್ಕೆ ಕಾರಣವಾಗುತ್ತದೆ.

 ಆ್ಯಂಟಿಬಯಾಟಿಕ್‌ಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಆ್ಯಂಟಿಬಯಾಟಿಕ್‌ಗಳ ಪ್ರತಿರೋಧದಿಂದಾಗಿ ಶರೀರವು ಯಾವುದೇ ಚಿಕಿತ್ಸೆ ಗೆ ಸಹಕರಿಸುವುದಿಲ್ಲ ಅಥವಾ ಸೋಂಕಿನ ವಿರುದ್ಧ ಔಷಧಿಯು ನಿರೀಕ್ಷಿತ ಪರಿಣಾಮವನ್ನುಂಟು ಮಾಡುವುದಿಲ್ಲ. ಆ್ಯಂಟಿಬಯಾಟಿಕ್ ಪ್ರತಿರೋಧವು ಕಿವಿ ಸೋಂಕು, ಸೈನಸ್, ಮೆನಿಂಜೈಟಿಸ್ ಅಥವಾ ಮಿದುಳ್ಪೊರೆಯುರಿತ, ಕ್ಷಯ,ನ್ಯುಮೋನಿಯಾ ಮತ್ತು ಹಲವಾರು ಚರ್ಮದ ಸೋಂಕುಗಳು ಸೇರಿದಂತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.

► ಆ್ಯಂಟಿಬಯಾಟಿಕ್‌ಗಳು ಹೃದಯಕ್ಕೆ ಹಾನಿಕಾರಕ:

 ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಅಧ್ಯಯನ ವರದಿಯಂತೆ ಸಾಮಾನ್ಯವಾಗಿ ಉಸಿರಾಟ ಮತ್ತು ಮೂತ್ರನಾಳ ಸೋಂಕುಗಳಂತಹ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಫ್ಲೋರೊಕ್ವಿನೊಲೋನ್ ವರ್ಗದ ಆ್ಯಂಟಿಬಯಾಟಿಕ್‌ಗಳು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು 2.4 ಪಟ್ಟು ಹೆಚ್ಚಿಸುತ್ತವೆ. ಅಧ್ಯಯನ ವರದಿಯು ಇಂತಹ ಸಾಮಾನ್ಯ ಬಳಕೆಯ ಆ್ಯಂಟಿಬಯಾಟಿಕ್ ಅನ್ನು ಪ್ರಶ್ನಿಸಿರುವುದು ಆಘಾತಕಾರಿಯಾಗಿದೆ. ಈ ಆ್ಯಂಟಿಬಯಾಟಿಕ್ ಪ್ರಾಥಮಿಕವಾಗಿ ಎರಡು ವಿಧಗಳ ಹೃದಯ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿರಬಹುದು ಎನ್ನುತ್ತದೆ ವರದಿ. ಸಿಪ್ರೊಫ್ಲೊಕ್ಸಾಸಿನ್‌ನಂತಹ ಫ್ಲೋರೊಕ್ವಿನೊಲೋನ್ ಆ್ಯಂಟಿಬಯಾಟಿಕ್‌ಗಳನ್ನು ಬಳಸುವವರು ಮಹಾಪಧಮನಿ ಮತ್ತು ಮೈಟ್ರಲ್ ವಾಲ್ವ್ ಅಥವಾ ಕಿರೀಟ ಕವಾಟದ ಹಿಮ್ಮುಖ ಹರಿವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಈ ಸ್ಥಿತಿಯಲ್ಲಿ ರಕ್ತವು ಉದ್ದೇಶಿತ ಪಥದ ಬದಲಾಗಿ ವಾಪಸ್ ಹೃದಯಕ್ಕೆ ಹರಿಯುತ್ತದೆ. ಅಧ್ಯಯನವು ಆ್ಯಂಟಿಬಯಾಟಿಕ್‌ಗಳು ಮತ್ತು ಇತರ ಹೃದಯ ಸಮಸ್ಯೆಗಳಿಗೂ ತಳುಕು ಹಾಕಿದೆ. ಹೆಚ್ಚಿನ ಪ್ರಕರಣಗಳಲ್ಲಿ ವೈದ್ಯರು ಹೆಚ್ಚಿನ ಮೌಖಿಕ ಹೀರುವಿಕೆ ಮತ್ತು ವಿವಿಧ ಕಾಯಲೆಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಸಾಮರ್ಥ್ಯದಿಂದಾಗಿ ಫ್ಲೋರೊಕ್ವಿನೊಲೋನ್ ವರ್ಗದ ಆ್ಯಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುತ್ತಾರೆ.

  ತಜ್ಞರು ಏನೆನ್ನುತ್ತಾರೆ? ರೋಗಿಗೆ ಒಂದು ದಿನದ ಮಾತ್ರೆಗಳನ್ನು ನೀಡಿ ಕಳುಹಿಸುವುದು ಉತ್ತಮ ನೀತಿಯಾಗುತ್ತದೆ ಎನ್ನುತ್ತಾರೆ ತಜ್ಞರು. ಈ ಆ್ಯಂಟಿಬಯಾಟಿಕ್ ಹೆಚ್ಚಿನ ಪ್ರಕರಣಗಳಲ್ಲಿ ಕೆಲಸ ಮಾಡುತ್ತದೆ,ಆದರೆ ವೈರಸ್ ಶರೀರವನ್ನು ಪ್ರವೇಶಿಸಿದ 48 ಗಂಟೆಗಳಲ್ಲ ಲಕ್ಷಣಗಳನ್ನು ಪ್ರಕಟಿಸಿದ ಸೋಂಕು ಪ್ರಕರಣಗಳಲ್ಲಿ ಇವುಗಳನ್ನು ಶಿಫಾರಸು ಮಾಡಬಾರದು. ಆ್ಯಂಟಿಬಯಾಟಿಕ್‌ಗಳ ಅತಿಯಾದ ಸೇವನೆಯು ಅವುಗಳಿಗೆ ಪ್ರತಿರೋಧವನ್ನು ಸೃಷ್ಟಿಸುತ್ತದೆ ಮತ್ತು ಯಾವುದೇ ಕಾಯಿಲೆಗೆ ಚಿಕಿತ್ಸೆಯನ್ನು ಹೆಚ್ಚು ಕಠಿಣವಾಗಿಸುತ್ತದೆ ಎನ್ನುತ್ತಾರೆ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ಪ್ರೊಫೆಸರ್ ಮಹ್ಯರ್ ಎಟ್ಮಿನನ್. ಆ್ಯಂಟಿಬಯಾಟಿಕ್‌ಗಳ ಅತಿಯಾದ ಸೇವನೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಇತರ ಯಾವುದೇ ಕಾರಣಗಳಿಲ್ಲದಿದ್ದಾಗ ಹೃದಯದ ಮೇಲೆ ಅವುಗಳ ಸಂಭಾವ್ಯ ಪರಿಣಾಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಸಂಶೋಧಕರ ಉದ್ದೇಶವಾಗಿದೆ. ಇಂತಹ ಸಂದರ್ಭಗಳಲ್ಲಿ ಫ್ಲೋರೊಕ್ವಿನೊಲೋನ್ ಆ್ಯಂಟಿಬಯಾಟಿಕ್‌ಗಳು ಈ ಸಮಸ್ಯೆಗಳಿಗೆ ಕಾರಣವಾಗಿರಬಹುದು. ಅಲ್ಲದೆ,ಸಣ್ಣಪುಟ್ಟ ಕಾರಣಗಳಿಗೂ ಆ್ಯಂಟಿಬಯಾಟಿಕ್‌ಗಳನ್ನು ನುಂಗುವವರ ಕಣ್ತೆರೆಸುವುದೂ ಅಧ್ಯಯನದ ಉದ್ದೇಶವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X