ಶ್ವೇತಭವನದ ಬಳಿ ಗುಂಡಿನ ದಾಳಿ: ಓರ್ವ ಬಲಿ, ಐವರಿಗೆ ಗಾಯ

ನ್ಯೂಯಾರ್ಕ್, ಸೆ.20: ಶ್ವೇತಭವನದಿಂದ ಮೂರು ಕಿ.ಮೀ. ದೂರದಲ್ಲಿ ವಾಶಿಂಗ್ಟನ್ ಡಿಸಿಯ ಬೀದಿಯಲ್ಲಿ ಗುರುವಾರ ರಾತ್ರಿ 10:00 ಗಂಟೆಗೆ ನಡೆದ ಗುಂಡಿನ ದಾಳಿಯಲ್ಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ತನಕ ಶಂಕಿತನನ್ನು ಬಂಧಿಸಿಲ್ಲ. ಗುಂಡುಹಾರಾಟದ ಹಿಂದಿನ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ ಎಂದು ಮೆಟ್ರೊಪಾಲಿಟನ್ ಪೊಲೀಸ್ ಕಮಾಂಡರ್ ಸ್ಟುವರ್ಟ್ ಎಮರ್‌ಮನ್ ಹೇಳಿದ್ದಾರೆ. ತನಿಖಾಧಿಕಾರಿಗಳು ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದ್ದು, ಕ್ಯಾಮರಾ ಫುಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಎಮರ್‌ಮನ್ ತಿಳಿಸಿದ್ದಾರೆ.
ಗುಂಡು ಹಾರಾಟದಲ್ಲಿ ಗಾಯಗೊಂಡಿರುವ ಐದು ಜನರ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಇತರ ಮೂವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರೆಲ್ಲರೂ ವಯಸ್ಕರು ಎಂದು ಎಮರ್‌ಮನ್ ಹೇಳಿದ್ದಾರೆ
Next Story