Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸೆಪ್ಟಂಬರ್ ತಿಂಗಳಿನಲ್ಲಿ ಅಸ್ತಮಾ ಕಾಯಿಲೆ...

ಸೆಪ್ಟಂಬರ್ ತಿಂಗಳಿನಲ್ಲಿ ಅಸ್ತಮಾ ಕಾಯಿಲೆ ಉಲ್ಬಣಿಸುವುದು ಏಕೆ?

ವಾರ್ತಾಭಾರತಿವಾರ್ತಾಭಾರತಿ20 Sept 2019 5:34 PM IST
share
ಸೆಪ್ಟಂಬರ್ ತಿಂಗಳಿನಲ್ಲಿ ಅಸ್ತಮಾ ಕಾಯಿಲೆ ಉಲ್ಬಣಿಸುವುದು ಏಕೆ?

ಸೆಪ್ಟಂಬರ್ ವಿಶ್ವಾದ್ಯಂತ ಹೆಚ್ಚಿನ ಅಸ್ತಮಾ ರೋಗಿಗಳನ್ನು ಕಾಡುವ ತಿಂಗಳಾಗಿದೆ. ಅಮೆರಿಕದಲ್ಲಿ ಈಗ ವಸಂತಕಾಲ,ಅಂದರೆ ಹೂವುಗಳು ನಳನಳಿಸುತ್ತಿರುತ್ತವೆ ಮತ್ತು ಅವುಗಳ ಪರಾಗ ವಾತಾವರಣದಲ್ಲಿ ಸೇರಿಕೊಂಡು ಅಸ್ತಮಾ ರೋಗಿಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಭಾರತದಲ್ಲಿ ಸೆಪ್ಟಂಬರ್ ತಿಂಗಳಿಗೆ ಮುಂಗಾರು ಮಳೆಯು ಅಂತ್ಯಗೊಳ್ಳುತ್ತದೆ ಮತ್ತು ವಾತಾವರಣವು ಅತ್ಯಂತ ಆರ್ದ್ರವಾಗಿರುತ್ತದೆ ಮತ್ತು ಇದೂ ಅಸ್ತಮಾ ರೋಗಿಗಳಿಗೆ ತೊಂದರೆಯನ್ನುಂಟು ಮಾಡುತ್ತದೆ.

ಒಟ್ಟಾರೆಯಾಗಿ ಹೆಚ್ಚು ಕಡಿಮೆ ವಿಶ್ವದ ಎಲ್ಲ ಭಾಗಗಳಲ್ಲಿ ಸೆಪ್ಟಂಬರ್ ಅಸ್ತಮಾ ರೋಗಿಗಳನ್ನು ಹೆಚ್ಚಾಗಿ ಕಾಡುವ ತಿಂಗಳಾಗಿದೆ.

ಅಸ್ತಮಾ ದೀರ್ಘಕಾಲಿಕ ರೋಗವಾಗಿದೆ. ಅದು ಶ್ವಾಸಕೋಶಗಳಲ್ಲಿ ತಡೆಯನ್ನುಂಟು ಮಾಡುವ ಮೂಲಕ ರೋಗಿಗಳಿಗೆ ಉಸಿರಾಟವನ್ನು ಕಷ್ಟವಾಗಿಸುತ್ತದೆ. ಅಸ್ತಮಾವನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲ,ಆದರೆ ಅಸ್ತಮಾ ತೊಂದರೆಯನ್ನು ಹೆಚ್ಚಿಸುವ ಕಾರಣಗಳನ್ನು ನಿವಾರಿಸುವ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ.

ಅಸ್ತಮಾ ದಾಳಿಯಿಂದ,ವಿಶೇಷವಾಗಿ ಸೆಪ್ಟಂಬರ್ ತಿಂಗಳಿನಲ್ಲಿ,ಪಾರಾಗಲು ನೆರವಾಗುವ ಕೆಲವು ಟಿಪ್ಸ್ ಇಲ್ಲಿವೆ......

►ವಾಯುವಿನಲ್ಲಿಯ ಮಾಲಿನ್ಯಕಾರಕಗಳಿಂದ ರಕ್ಷಿಸಿಕೊಳ್ಳಿ

 ಮೊಟ್ಟಮೊದಲ ಮತ್ತು ಅತ್ಯಂತ ಮಹತ್ವದ ಹೆಜ್ಜೆಯೆಂದರೆ ಮಾಲಿನ್ಯಭರಿತ ಮತ್ತು ಧೂಳಿನಿಂದ ಕೂಡಿದ ವಾತಾವರಣಕ್ಕೆ ಒಡ್ಡಿಕೊಳ್ಳವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ಇದು ಎಲ್ಲ ಅಸ್ತಮಾ ರೋಗಿಗಳಿಗೂ ಅನ್ವಯಿಸುತ್ತದೆ. ಮನೆಯಿಂದ ಹೊರಗೆ ಹೋಗುವುದಿದ್ದರೆ ಗಾಳಿಯಲ್ಲಿ ಮಾಲಿನ್ಯಗಳಿಂದ ರಕ್ಷಿಸಿಕೊಳ್ಳಲು ಮೂಗು ಮತ್ತು ಬಾಯಿಗೆ ಮಾಸ್ಕ್ ಧರಿಸಿ ಇಲ್ಲವೇ ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಮನೆಯೊಳಗಿದ್ದಾಗ ಕೊಳೆ,ಧೂಳಿನಂತಹ ಅಲರ್ಜಿಕಾರಕಗಳ ಸಂಪರ್ಕವುಂಟಾಗುವುದನ್ನು ನಿವಾರಿಸಿ. ಈ ಕ್ರಮಗಳ ಮೂಲಕ ಅಸ್ತವಾ ದಾಳಿಗಳುಂಟಾಗುವುದನ್ನು ಮತ್ತು ಅದರ ತೀವ್ರತೆಯನ್ನು ನಿಯಂತ್ರಿಸಲು ಸಾಧ್ಯ.

►ಸಾಮಾನ್ಯ ಶೀತದಿಂದ ದೂರವಿರಿ

ಈ ಸಮಯದಲ್ಲಿ ವಾತಾವರಣದಲ್ಲಿನ ಶೀತವನ್ನುಂಟು ಮಾಡುವ ಸೂಕ್ಷ್ಮಜೀವಿಗಳು ಅಸ್ತಮಾ ರೋಗಿಗಳಿಗೆ ಹೆಚ್ಚಿನ ಸಮಸ್ಯೆಗಳನ್ನುಂಟು ಮಾಡುತ್ತವೆ. ಕೆಮ್ಮು ಮತ್ತು ಶೀತ ಅಸ್ತಮಾವನ್ನು ಹೆಚ್ಚಿಸುವ ಕಾರಣಗಳಲ್ಲಿ ಸೇರಿವೆ. ಸೆಪ್ಟಂಬರ್‌ನಲ್ಲಿ ಅಸ್ತಮಾ ದಾಳಿಗೆ ಸಿಲುಕದಂತೆ ರೋಗಿಗಳು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಕೆಮ್ಮು ಮತ್ತು ಶೀತದಿಂದ ಪೀಡಿತ ವ್ಯಕ್ತಿಯಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.

►ಸೂಕ್ತ ಔಷಧಿಗಳನ್ನು ಸೇವಿಸಿ

 ಸೆಪ್ಟಂಬರ್ ತಿಂಗಳು ಅಸ್ತಮಾ ರೋಗಿಗಳಿಗೆ ಪಿಡುಗಾಗಿರುವುದರಿಂದ ಯಾವುದೇ ಗಂಭೀರ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇನ್‌ಹೇಲರ್ ಸದಾ ನಿಮ್ಮೆಂದಿಗಿರಲಿ. ಕೆಲವೊಮ್ಮೆ ವ್ಯದ್ಯರು ತೀವ್ರ ಅಸ್ತಮಾ ತೊಂದರೆಯಿರುವ ರೋಗಿಗಳಿಗೆ ಎರಡು ಇನ್‌ಹೇಲರ್ ಔಷಧಿಗಳನ್ನು ಸೂಚಿಸುತ್ತಾರೆ. ಔಷಧಿಗಳನ್ನೆಂದಿಗೂ ತಪ್ಪಿಸಬೇಡಿ ಮತ್ತು ಅತಿಯಾದ ಪ್ರಮಾಣದಲಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ,ಇಲ್ಲದಿದ್ದರೆ ಸ್ಥಿತಿಯು ಇನ್ನಷ್ಟು ಹದಗೆಡಬಹುದು.

►ಸ್ಮಾರ್ಟ್ ಡಿವೈಸ್‌ವೊಂದು ನಿಮ್ಮ ಬಳಿಯಿರಲಿ

ಈಗ ಲಭ್ಯವಿರುವ ಸ್ಮಾರ್ಟ್ ಇನ್‌ಹೇಲರ್‌ಗಳು ಅಸ್ತಮಾ ಸ್ಥಿತಿಯ ಜಾಡನ್ನು ಕಂಡುಕೊಳ್ಳುವಲ್ಲಿ ನಿಜಕ್ಕೂ ಉಪಯುಕ್ತ ಸಾಧನಗಳಾಗಿವೆ. ಈ ಸಾಧನಗಳು ಮೊಬೈಲ್ ಆ್ಯಪ್‌ನೊಂದಿಗೆ ಸಂಪರ್ಕಿತ ಬ್ಲೂ ಟೂಥ್ ತಂತ್ರಜ್ಞಾನವನ್ನು ಬಳಸುತ್ತವೆ. ಇದು ವೈದ್ಯರು ಮತ್ತು ಹೆತ್ತವರಿಗೆ ನೈಜ ಕಾಲಿಕ ಮಾಹಿತಿಗಳನ್ನು ರವಾನಿಸುವುದರಿಂದ ವಿಶೇಷವಾಗಿ ಮಕ್ಕಳ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ಈ ಆ್ಯಪ್‌ನ್ನು ಬಳಸುವ ಮೂಲಕ ಅವರ ಸ್ಥಿತಿಯ ಮೇಲೆ ನಿಗಾಯಿರಿಸಬಹುದು. ವಾತಾವರಣದಲ್ಲಿಯ ಇತರ ಅಲರ್ಜಿಕಾರಕಗಳ ವಿರುದ್ಧ ಹೋರಾಡಲು ವಾಯು ಗುಣಮಟ್ಟವನ್ನು ಅಳೆಯುವ ಸೌಲಭ್ಯ ಹೊಂದಿರುವ ಇತರ ಸ್ಮಾರ್ಟ್ ಸಾಧನಗಳೂ ಲಭ್ಯವಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X