ವಿಟ್ಲ ಅಧ್ಯಾಪಕರ ಸಹಕಾರ ಸಂಘ: ರಾಜ್ಯ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ವಿಟ್ಲ, ಸೆ. 20: ವಿಟ್ಲ ಅಧ್ಯಾಪಕರ ಸಹಕಾರ ಸಂಘ ಇದರ ವಾರ್ಷಿಕ ಮಹಾ ಸಭೆಯು ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಸಂಘವು ಪ್ರಸಕ್ತ ವರ್ಷ 1,49,62,014.47 ರೂ ಲಾಭ ಗಳಿಸಿದ್ದು, ಶೇ. 15 ಡಿವಿಡೆಂಡ್ ಘೋಷಿಸಲಾಯಿತು.
ರಾಜ್ಯ ಪ್ರಶಸ್ತಿ ವಿಜೇತ ಸುಳ್ಯ ಅಲೆಟ್ಟಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಪದ್ಮಾ ಡಿ. ಮತು ವಗ್ಗ ಸ.ಪ.ಪೂ ಕಾಲೇಜಿನ ಶೇಖ್ ಆದಂ ಸಾಹೇಬ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಲೀಲಾವತಿ, ಶೋಭಾ, ಸವಿತಾ, ದೊಡ್ಡಕೆಂಪಯ್ಯ, ಮೋನಪ್ಪ ಕೆ, ತಾರಾನಾಥ, ತ್ಯಾಗಂ ಎಂ ಶ್ರೀರಾಮಕೃಷ್ಣ, ಗಣಪತಿ ಎಸ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, ಬಂಟ್ವಾಳ ಸಹಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ದ.ಕ. ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಮಕೃಷ್ಣ ಶಿರೂರು, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಗೌರವ ಸಲಹೆಗಾರ ಕೆ. ರಮೇಶ್ ನಾಯಕ್ ರಾಯಿ, ನಿರ್ದೇಶಕರಾದ ಜೆಸಿಂತಾ ಸೋಫಿಯಾ ಮಸ್ಕರೇನಸ್, ಕುಂಞÂ ನಾಯ್ಕ, ನವೀನ್, ಕಮಲಾಕ್ಷ, ಜಗನ್ನಾಥ ಎಂ, ಸೇಸಪ್ಪ ಮೂಲ್ಯ, ಚಿತ್ರಕಲಾ, ಸಂಜೀವ ಎಚ್, ಬಾಬು ಗೌಡ, ಎನ್. ಆನಂದ, ಸುರೇಶ್ ಕುಮಾರ್, ಪ್ರಭಾಕರ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಮೋನಪ್ಪ ಕೆ ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಂದ್ರ ರೈ ವಂದಿಸಿದರು.







