ಅವಧಿ ಮೀರಿದ ಮದ್ಯ ಮಾರಾಟ ಆರೋಪ: ಮೂವರ ಬಂಧನ
ಬೆಂಗಳೂರು, ಸೆ.21: ಹೆಬ್ಬಾಳದ ಹೊರ ವರ್ತುಲ ರಸ್ತೆಯ ಕಂಟ್ರಿಯಾರ್ಡ್ ಮ್ಯಾರಿಯೇಟ್ ಹೊಟೇಲ್‌ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಅವಧಿ ಮೀರಿದ ಮದ್ಯ ಸರಬರಾಜು ಮಾಡಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಥಣಿಸಂದ್ರದ ವರುಣ್ ಪಂಡಿತ್ (35) ಜಗದೀಶ್ ನಗರದ ಧನರಾಜ್ ಶೆಟ್ಟಿ (33) ಹಾಗೂ ವೀರಣ್ಣ ಪಾಳ್ಯದ ಆನಂದ್ ವರ್ಧನ್ (31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದು ಊಟ ತಿಂಡಿಯ ಜೊತೆಗೆ ಅಕ್ರಮವಾಗಿ ಅವಧಿ ಮೀರಿದ ಮದ್ಯ ಸರಬರಾಜು ಮಾಡುತ್ತಿರುವುದು ಕಾರ್ಯಾಚರಣೆಯಲ್ಲಿ ಕಂಡು ಬಂದಿದೆ.
ಪ್ರಕರಣದಲ್ಲಿ ಕಂಟ್ರಿಯಾರ್ಡ್ ಮ್ಯಾರಿಯೇಟ್ ಹೊಟೇಲ್‌ನ ಮಾಲಕ ವ್ಯವಸ್ಥಾಪಕರಾದ ಇಲ್ಯಾಸ್, ನಕಾಶ್, ಗೌತಮ್, ಭಾಗಿಯಾಗಿರುವುದು ಪತ್ತೆಯಾಗಿದ್ದು, ಈ ಸಂಬಂಧ ಅಮತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Next Story