ಮೂಡುಬಿದಿರೆ: ಕೂಲಿಕಾರ್ಮಿಕ ನಾಪತ್ತೆ
ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಬಿಲ್ಲುಗುಡ್ಡೆ ನಿವಾಸಿ ಕೂಲಿ ಕಾಮಿಕ ಸತೀಶ್ ಪೂಜಾರಿ(38ವ) ಕಳೆದ ಸೆ12ರಿಂದ ಮನೆಯಿಂದ ತೆರಳಿದವರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಮೂಡುಮಾರ್ನಾಡಿನ ಸಂಗೀತಾ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐದು ಅಡಿ ಎತ್ತರ, ಎಣ್ಣೆಕಪ್ಪು ಮೈ ಬಣ್ಣದ ಸತೀಶ್ ಅತಿಯಾದ ಮದ್ಯ ಸೇವನೆಯ ಚಟ ಹೊಂದಿದ್ದು ಹಿಂದಿ ಕನ್ನಡ ತುಳು ಬಲ್ಲವರಾಗಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕಿದವರು ಮೂಡುಬಿದಿರೆ ಪೋಲೀಸ್ ಠಾಣೆ(08258 236333) ಗೆ ಮಾಹಿತಿ ನೀಡುವಂತೆ ಕೋರಿದೆ.
Next Story