ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.22: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮುಂದಿನ ದಿನಮಾನಗಳಲ್ಲಿ ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ರವಿವಾರ ಹೊಸಕರೆಹಳ್ಳಿಯ ಕಮ್ಮವಾರಿ ಸೊಸೈಟಿಯ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಚಿಕ್ಕಗಿಡ ಹೇಗೆ ಬೆಳೆದು ದೊಡ್ಡದಾಗಿ ನೆರಳನ್ನು ಕೊಡುತ್ತದೆಯೋ ಹಾಗೆ ಚಿಕ್ಕದಾಗಿ ಹುಟ್ಟಿರುವ ಕೋ ಆಪರೇಟಿವ್ ಸೊಸೈಟಿಗಳು ಬೃಹತ್ ಆಗಿ ಬೆಳೆದು ದೇಶದ ಆರ್ಥಿಕ ಸಫಲತೆಗೆ ಕಾರಣವಾಗಿವೆ. ಸರಕಾರದ ಸಹಾಯಧನಲ್ಲದೆ ಹಾಗೂ ಜನಪ್ರತಿನಿಧಿಗಳ ಹಸ್ತಕ್ಷೇಪವಿಲ್ಲದೆ ಅತ್ಯಂತ ಎತ್ತರಕ್ಕೆ ಕಮ್ಮವಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೆಳೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಲ್ಲದೆ, 1993ರಲ್ಲಿ ಕೇವಲ 11 ಲಕ್ಷ ಬಂಡವಾಳ ಹೂಡಿ ಈಗ ಕೋಪರೇಟಿವ್ ಸೊಸೈಟಿಯಲ್ಲಿಯೇ ಅತ್ಯಂತ ಎತ್ತರಕ್ಕೆ ಬೆಳೆದು ತಮ್ಮ ಜನಾಂಗಕ್ಕೆ, ಸಾರ್ವಜನಿಕರಿಗೆ ಸಾಲಸೌಲಭ್ಯ ಕೊಡುವ ಮೂಲಕ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಡಿ ದರ್ಜೆಯಲ್ಲಿ ಸಂಸ್ಥೆ ಕೆಲಸ ಮಾಡಿ ಕಳೆದ 25 ವರ್ಷಗಳಿಂದ ಎ ದರ್ಜೆಗೆ ಯಾವುದೇ ಲೋಪವಿಲ್ಲದೆ ಪ್ರಬಲವಾಗಿ ಬೆಳೆದುಕೊಂಡು ಬಂದಿದೆ. ಪ್ರತಿ ಶತ ಶೇ.25 ಲಾಭಾಂಶ ನೀಡುತ್ತಿರುವುದು ಉತ್ತಮ ಬೆಳೆವಣಿಗೆ ಎಂದರು.
ವಿಧಾನಸಭಾದ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಕಮ್ಮಾರಿ ಸಮಾಜ ಬಹಳ ಕಷ್ಟದಿಂದಲೇ ಸಮಾಜವನ್ನು ಮೇಲುತ್ತುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಕ್ರಡಿಟ್ ಅಂದರೆ ಕೇವಲ ಸಾಲ ಎಂದರ್ಥವಲ್ಲ ಬೇರೆ ಬೇರೆ ಅರ್ಥವನ್ನು ಕೊಡುತ್ತದೆ. ಸಂಸ್ಥೆಯ ಸದಸ್ಯರಿಗೆ ಗೌರವಯುತವಾಗಿ ಸಾಲ ಕೊಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ದೇಶ ಸಾಲದಿಂದಲೇ ನರಳು ತ್ತಿರುವುದನ್ನು ಪ್ರಸ್ತಾಪಿಸಿದರು.
ಸಾಲವನ್ನು ಕೆಲವರಿಗೆ ಕೊಡುವ ಅನಿವಾರ್ಯತೆ ಸಂಸ್ಥೆಗಳಿಗೆ ಇರುವುದರಿಂದ ಸಾಲ ಸೌಲಭ್ಯಗಳನ್ನು ಕೊಡುತ್ತದೆ. ಅರ್ಥವ್ಯವಸ್ಥೆ ಇದರ ಸುತ್ತ ತಿರುಗುತ್ತಲೇ ಇರುತ್ತದೆ. ಹೀಗಾಗಿ ಕಮ್ಮವಾರಿ ಸಂಸ್ಥೆ ರಜತ ಮಹೋತ್ಸವ ಸಮಾರಂಭ ಆಚರಿಸುತ್ತಿದೆ ಎಂದರೆ ಆರೋಗ್ಯಕರವಾಗಿದೆ ಎಂದರ್ಥ ಎಂದು ತಿಳಿಸಿದರು.
ಇದೇ ವೇಳೆ ಕಮ್ಮವಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ ಅಧ್ಯಕ್ಷ ಡಾ.ಟಿ.ಭದ್ರಾಚಲಂ ಮಾತನಾಡಿ, ಕಳೆದ 25 ವರ್ಷಗಳಿಂದ ಕಮ್ಮವಾರಿ ಸಂಸ್ಥೆ ಅನೇಕ ಜನೋಪಯೋಗಿ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಂಸ್ಥೆಯಲ್ಲಿ 6ಸಾವಿರ ಜನ ಸದಸ್ಯರಿದ್ದಾರೆ.
ಪ್ರವಾಹ ಪೀಡಿತಿಗೆ ಅನುಕೂಲ ವಾಗಲೆಂದು ಸಿಎಂ ಪ್ರವಾಹ ಪರಿಹಾರ ನಿಧಿಗೆ 10 ಲಕ್ಷ ಹಣವನ್ನು ನೀಡಿದೆ. ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಸಾಲ, ಅನುತ್ಪಾದಕ ಆಸ್ತಿ ಸಮಸ್ಯೆ ಹೆಚ್ಚಾಗಿರುವ ಸಂದರ್ಭದಲ್ಲಿ ನಮ್ಮ ಸಹಕಾರ ಸಂಸ್ಥೆ ಸಂಘದ ಸದಸ್ಯರು ಮತ್ತು ಠೇವಣಿದಾರರ ಹಿತ ರಕ್ಷಣೆಗೆ ಒತ್ತು ನೀಡಿದೆ ಎಂದರು.
.jpg)







