ಪಲ್ಸ್ ಪೋಲಿಯೊ: ವದಂತಿಗಳಿಗೆ ಕಿವಿಗೊಡಬೇಡಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮನವಿ
ಬೆಂಗಳೂರು, ಸೆ.23: ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿಕೊಳ್ಳುವ ವಿಚಾರವಾಗಿ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗೆ ಕಿವಿಗೊಡಬೇಡಿ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮನವಿ ಮಾಡಿದೆ.
‘‘ದಯಮಾಡಿ ಬೇಗ ಶೇರ್ ಮಾಡಿ ನಾಳೆ ಐದು ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೊ ಕೊಡಿಸಬೇಡಿ, ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೋಲಿಯೊ ತಯಾರು ಮಾಡಿದ ಆ ಕಂಪೆನಿ ಯಜಮಾನರನ್ನು ಆರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ ಸತ್ಯ ಸತ್ಯ’’ ಎಂಬ ಸುಳ್ಳು ಸಂದೇಶ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ. ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story