Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನೀವು ಯಾವ ಹೀರೋಯಿನ್ ಜೊತೆ ಹೇಗೆ...

ನೀವು ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ: ಎಚ್.ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ವಾಗ್ದಾಳಿ

ವಾರ್ತಾಭಾರತಿವಾರ್ತಾಭಾರತಿ23 Sept 2019 2:31 PM IST
share
ನೀವು ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ: ಎಚ್.ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ವಾಗ್ದಾಳಿ

ಮೈಸೂರು, ಸೆ.23: “ನೀವು ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿಕೊಳ್ಳುತ್ತೀರಾ” ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.  

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 25 ಲಕ್ಷ ರೂ. ಪಡೆದಿದ್ದೇನೆ. ಈ ವರ್ಗಾವಣೆ ಮಾಡಿ ಕೊಡಿ ಎಂದು ಅವತ್ತು ಕೇಳಿದರಲ್ಲ. ಅದನ್ನು ನಾನು ಮಾಡಿಸಿ ಕೊಡಲಿಲ್ಲ ಎಂದು ಹೀಗೆ ಮಾತನಾಡುತ್ತಿದ್ದೀರಾ? ನೀವು ವಕೀಲರಾಗಿದ್ದಾಗ ಒಬ್ಬ ವಿಧವೆ ನಿಮ್ಮ ಬಳಿ ನ್ಯಾಯ ಕೇಳೋಕೆ ಬಂದ ಅವರ ಕಥೆ ಏನಾಯ್ತು ಎಂದು ಹೇಳಬೇಕಾ? 1994ರಲ್ಲಿ ಕೆ.ಆರ್. ನಗರದ ಹಳ್ಳಿಗಳಿಗೆ ನೀವು ಹೋದಾಗ ಮನೆ ಬಾಗಿಲು ಯಾಕೆ ಹಾಕಿಕೊಳ್ಳುತ್ತಿದ್ದರು ಅನ್ನೋದು ಹೇಳಬೇಕಾ? ಎಂದು ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಿದರು.

ನಾನು ನಿಮಗಿಂತ ಏಕವಚನದಲ್ಲಿ ಮಾತಾಡಬಲ್ಲೆ. ಆದರೆ ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ, ಅದಕ್ಕೆ ಮಾತನಾಡುವುದಿಲ್ಲ. ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಸಾಕು ನಾನು ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಾನಾ ಅಯೋಗ್ಯ ನೀವಾ ಅಂತಾ ತೀರ್ಮಾನವಾಗಲಿ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು. ನಿಮ್ಮ ಯೋಗ್ಯತೆ ಮೈಸೂರು ಮತ್ತು ಮಡಿಕೇರಿ ಜನರಿಗೆ ಗೊತ್ತಿದೆ. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನನ್ನ ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಮಹೇಶ್ ಕಿಡಿಕಾರಿದರು.

ನಾನು ಜನರ ಮನೆಗೆ ಹೋದರೆ ನನ್ನ ಅಣ್ಣ ಬಂದ, ತಮ್ಮ ಬಂದ, ಮಗ ಬಂದಾ ಎಂದು ಮನೆಯೊಳಗೆ ಕರೆಯುತ್ತಾರೆ. ನೀವು ಹೋದರೆ ಜನ ಎಲ್ಲಿ ನಿಮ್ಮನ್ನು ಕೂರಿಸುತ್ತಾರೆ ಎಂದು ಗೊತ್ತಿದೆ. ಅನರ್ಹ ಆದ ಮೇಲೆ ಎಚ್.ವಿಶ್ವನಾಥ್ ಹೋಗಿ ಹುಚ್ಚು ವಿಶ್ವನಾಥ್ ಆಗಿದ್ದಾರೆ. ಅವರಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು. ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ ಇಲ್ಲ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ವಿಶ್ವನಾಥ್ ಗೆ ಸವಾಲು ಹಾಕಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X