ಗ್ರಾಹಕರಿಗೆ ಕಹಿ ಸುದ್ದಿ: ಚಿನ್ನದ ಬೆಲೆ ಏರಿಕೆ

ಹೊಸದಿಲ್ಲಿ,ಸೆ.23: ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ದಿಲ್ಲಿಯಲ್ಲಿ ಸೋಮವಾರ ಚಿನ್ನದ ಬೆಲೆಗಳಲ್ಲಿ 130 ರೂ.ಏರಿಕೆಯಾಗಿದ್ದು,24 ಕ್ಯಾರಟ್ ಚಿನ್ನ ಪ್ರತಿ 10 ಗ್ರಾಮ್‌ಗಳಿಗೆ 38,690 ರೂ.ಗೆ ತಲುಪಿದೆ. ಶನಿವಾರ ಅದು 38,560 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.
ಬೆಳ್ಳಿ ಕೂಡ ಪ್ರತಿ ಕೆಜಿಗೆ 47,999 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಅದು 47,090 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,512 ಡಾ. ಮತ್ತು ಬೆಳ್ಳಿ ಬೆಲೆ 17.87 ಡಾ.ಆಗಿತ್ತು.
Next Story





