ದಂಡ ವಸೂಲಿ ಮಾಡಿದ ಪೇದೆಯ ವಸ್ತುಗಳು ಕಳವು: ಆರೋಪಿ ಬಂಧನ

ಬೆಂಗಳೂರು, ಸೆ.23: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ಅಧಿಕ ಮೊತ್ತದ ದಂಡ ವಸೂಲಿ ಮಾಡಿದ ಸಂಚಾರ ಪೊಲೀಸ್ ಪೇದೆಯೊಬ್ಬರ ವಸ್ತುಗಳನ್ನು ಕಳವು ಮಾಡಿರುವ ವ್ಯಕ್ತಿಯೋರ್ವನನ್ನು ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಶೋಕ್ ಗಜರೆ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಶೋಕ್ ಗಜರೆ, ತಮ್ಮ ವಾಹನವನ್ನು ನಿಷೇಧಿತ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಪೇದೆ ಎಂ.ಮುಸ್ತಫಾ ಆತನಿಗೆ ದಂಡ ವಿಧಿಸಿದ್ದರು ಎನ್ನಲಾಗಿದೆ.
ದಂಡ ವಿಧಿಸಿದ್ದರಿಂದ ಕೋಪಗೊಂಡ ಅಶೋಕ್, ಪೇದೆ ಮುಸ್ತಫಾ ಅವರ ವಸತಿ ಗೃಹದವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ, ಬೈಕಿನಲ್ಲಿದ್ದ ಪೊಲೀಸ್ ರೈನ್ ಕೋಟ್, ಟ್ಯಾಬ್, ಮಾಸ್ಕ್ ಕಳವು ಮಾಡಿದ್ದಾನೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story