ಎಸ್.ವೈ.ಎಸ್. ಮೋಂಟುಗೋಳಿ ಶಾಖೆಯ ಮಹಾಸಭೆ

ಮಂಗಳೂರು, ಸೆ.24: ಎಸ್.ವೈ.ಎಸ್. ಮೋಂಟುಗೋಳಿ ಶಾಖೆಯ ವಾರ್ಷಿಕ ಮಹಾಸಭೆ ಮರ್ಹೂಂ ಮುಹಮ್ಮದ್ ಹಾಜಿ ಮನೆಯಲ್ಲಿ ಅಬೂಬಕರ್ ಮದನಿ ನೇತೃತ್ವ ದಲ್ಲಿ ಜರಗಿತು. ಈ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು ಅಬ್ಬಾಸ್ ಕೆ., ಉಪಾಧ್ಯಕ್ಷರು ಹಾರಿಸ್ ಸಖಾಫಿ, ಕಾರ್ಯದರ್ಶಿ ಫೈಝಲ್ ಎಂ., ಜೊತೆ ಕಾರ್ಯದರ್ಶಿ ರಶೀದ್ ಟಿ., ಹಮೀದ್ ಕೆ.ಎಲ್., ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಟಿ.ಎಂ. ಹಾಗೂ 10 ಮಂದಿ ಸಮಿತಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಮುಡಿಪು ಸೆಕ್ಟರಿನ ಬಾವ ಹಾಜಿ ಉಪಸ್ಥಿತರಿದ್ದರು.
ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಮುಹಮ್ಮದ್ ಬಾಕಿಮಾರ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
Next Story