ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್
ಬೆಂಗಳೂರು, ಸೆ.24: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ಪಾಸ್ ನೀಡುವುದಕ್ಕೆ ಸಹಾಯಧನ ನೀಡಲು ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕ ಕಲ್ಯಾಣ ಮಂಡಳಿ ಅನುಮತಿ ನೀಡಿದೆ.
ರಾಜ್ಯದಲ್ಲಿ 12 ಲಕ್ಷಕ್ಕೂ ಅಧಿಕ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಬೆಂಗಳೂರಿನಲ್ಲಿ 1.10 ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿನ ಕಾರ್ಮಿಕರಿಗೆ ಬಸ್ಪಾಸ್ ನೀಡಲಾಗುತ್ತದೆ. ಅದಕ್ಕೆ ಖರ್ಚಾಗುವ 5.24 ಕೋಟಿ ರೂ.ಗಳನ್ನು ಮಂಡಳಿಯಿಂದ ಬಿಎಂಟಿಸಿಗೆ ನೀಡಲಾಗಿದೆ. ಮಂಡಳಿ ನೀಡುವ ಫಲಾನುಭವಿಗಳ ಪಟ್ಟಿಯನ್ನಾಧರಿಸಿ ಪಾಸ್ ವಿತರಿಸುವಂತೆ ಬಿಎಂಟಿಸಿಗೆ ಮಂಡಳಿಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
Next Story