ನಾಪತ್ತೆಯಾದ ಮೀನುಗಾರ ಕುಟುಂಬಕ್ಕೆ ಶೀಘ್ರ ಗರಿಷ್ಠ ಪರಿಹಾರ: ಉಡುಪಿ ಶಾಸಕ ಕೆ.ರಘುಪತಿ ಭಟ್
ಸುವರ್ಣ ತ್ರಿಭುಜ ಬೋಟು ದುರಂತ
ಉಡುಪಿ, ಸೆ.24: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ‘ಸುವರ್ಣ ತ್ರಿಭುಜ’ ಬೋಟ್‌ನಲ್ಲಿದ್ದ ಎಲ್ಲಾ ಏಳು ಮೀನುಗಾರರ ಕುಟುಂಬಗಳಿಗೆ ಗರಿಷ್ಠ ಪರಿಹಾರ ದೊರಕಿಸಿಕೊಡಲು ಎಲ್ಲಾ ಪ್ರಯತ್ನಗಳು ನಡೆಯುತಿದ್ದು, ಎರಡು ವಾರದೊಳಗೆ ಇದು ಸಫಲಗೊಳ್ಳುವ ನಿರೀಕ್ಷೆ ಇದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದ್ರದಾಳದಲ್ಲಿ ಪತ್ತೆಯಾಗಿರುವ ಬೋಟಿನ ಅವಶೇಷ ಸುವರ್ಣ ತ್ರಿಭುಜದ್ದೆಂಬುದು ಇದೀಗ ಖಚಿತಗೊಂಡಿದೆ. ನೌಕಾಪಡೆಗೆ ಸೇರಿದ ಐಎನ್‌ಎಸ್ ಕೊಚ್ಚಿನ್ ಢಿಕ್ಕಿಯಾಗಿ ಬೋಟ್ ಮುಳುಗಿರುವ ಅನುಮಾನ ಬಲವಾಗಿದ್ದು, ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದವರು ತಿಳಿಸಿದರು.
ಬೋಟಿನಲ್ಲಿದ್ದು, ನಾಪತ್ತೆಯಾಗಿರುವ ಒಟ್ಟು ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ಸದ್ಯ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗುವ ತಲಾ 11 ಲಕ್ಷ ರೂ. ಪರಿಹಾರ ಸಿಕ್ಕಿದೆ. ಇದೊಂದು ವಿಶೇಷ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಗರಿಷ್ಠ ಪರಿಹಾರ ದೊರಕಿಸಿಕೊಡಲು ಪ್ರಯತ್ನ ಮುಂದುವರಿದಿದೆ. ಈಗಾಗಲೇ ಮೀನುಗಾರರ ಕುಟುಂಬದೊಂದಿಗೆ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್ ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಎಂದು ಕೆ.ರಘುಪತಿ ಭಟ್ ತಿಳಿಸಿದರು.
ಬೋಟಿನಲ್ಲಿದ್ದು, ನಾಪತ್ತೆಯಾಗಿರುವ ಒಟ್ಟು ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ಸದ್ಯ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗುವ ತಲಾ 11 ಲಕ್ಷ ರೂ. ಪರಿಹಾರ ಸಿಕ್ಕಿದೆ. ಇದೊಂದು ವಿಶೇಷ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಗರಿಷ್ಠ ಪರಿಹಾರ ದೊರಕಿಸಿಕೊಡಲು ಪ್ರಯತ್ನ ಮುಂದುವರಿದಿದೆ. ಈಗಾಗಲೇ ಮೀನುಗಾರರ ಕುಟುಂಬದೊಂದಿಗೆ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್ ಸಿಂಗ್‌ರನ್ನು ೇಟಿಮಾಡಿಮನವಿಮಾಡಲಾಗಿದೆ.ಎಂದುಕೆ.ರಘುಪತಿಟ್ ತಿಳಿಸಿದರು. ಇದೊಂದು ಸೂಕ್ಷ್ಮ ವಿಚಾರ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ. ಐಎನ್‌ಎಸ್ ಕೊಚ್ಚಿ ಹೋಗಿರುವ ಮಾರ್ಗದಲ್ಲೇ ಬೋಟ್‌ನ ಅವಶೇಷ ಸಿಕ್ಕಿದ್ದು, ಡಿಕ್ಕಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೇವೆ. ರಾಜನಾಥ್ ಸಿಂಗ್ ತನಿಖೆ ನಡೆಸಿ ನ್ಯಾಯ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಬೋಟಿನ ಸಾಲ ಭರಿಸುವ ಸರಕಾರ: ಸುವರ್ಣ ತ್ರಿಭುಜ ಬೋಟ್‌ಗೆ ಸಂಬಂಧಿ ಸಿದಂತೆ ಸಹಕಾರಿ ಸಂಘದಲ್ಲಿದ್ದ ಸಾಲವನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಭರಿಸುವ ಆಶ್ವಾಸನೆ ನೀಡಿದೆ. ಬೋಟಿಗೆ ಮಾಡಿದ ವಿಮೆಯಿಂದ 40 ಲಕ್ಷ ರೂ. ಬಂದಿದ್ದು, ಅದು ನೀಡಿದ ಬಳಿಕವೂ ಸುಮಾರು 28 ಲಕ್ಷ ರೂ.ಗಳಷ್ಟು ಸಾಲ ಸುವರ್ಣ ತ್ರಿಭುಜ ಬೋಟ್‌ಗಿತ್ತು. ಕುಟುಂಬದ ಆರ್ಥಿಕ ಹಿನ್ನೆಲೆಯನ್ನು ಗಮನಿಸಿ ರಾಜ್ಯ ಸರಕಾರ ಈ ಸಾಲವನ್ನು ಸಂಪೂರ್ಣವಾಗಿ ಭರಿಸುವುದಾಗಿ ತಿಳಿಸಿದೆ ಎಂದು ಭಟ್ ಹೇಳಿದರು.
ಸುವರ್ಣತ್ರಿುಜ ಬೋಟ್‌ಗೆ ಸಂಬಂಧಿ ಸಿದಂತೆ ಸಹಕಾರಿ ಸಂಘದಲ್ಲಿದ್ದ ಸಾಲವನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ರಿಸುವಆಶ್ವಾಸನೆನೀಡಿದೆ.ಬೋಟಿಗೆಮಾಡಿದವಿಮೆಯಿಂದ40ಲಕ್ಷರೂ.ಬಂದಿದ್ದು,ಅದುನೀಡಿದಬಳಿಕವೂಸುಮಾರು28ಲಕ್ಷರೂ.ಗಳಷ್ಟುಸಾಲಸುವರ್ಣತ್ರಿುಜ ಬೋಟ್‌ಗಿತ್ತು. ಕುಟುಂಬದ ಆರ್ಥಿಕ ಹಿನ್ನೆಲೆಯನ್ನು ಗಮನಿಸಿ ರಾಜ್ಯ ಸರಕಾರ ಈ ಸಾಲವನ್ನು ಸಂಪೂರ್ಣವಾಗಿ ರಿಸುವುದಾಗಿತಿಳಿಸಿದೆಎಂದುಟ್ ಹೇಳಿದರು. ಈ ಪ್ರಕರಣವನ್ನು ನಾವು ಲಘವಾಗಿ ತೆಗೆದುಕೊಂಡಿಲ್ಲ. ಮುಂದಿನ 15 ದಿನದೊಳಗೆ ಕೇಂದ್ರ ಸರಕಾರದ ಪ್ರಮುಖರನ್ನು ಮತ್ತೊಮ್ಮೆ ಭೇಟಿಯಾಗಿ ಗರಿಷ್ಠ ಮೊತ್ತದ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇವೆ ಎಂದರು.







