ತೆಂಕನಿಡಿಯೂರು: ಯೂತ್ ರೆಡ್‌ಕ್ರಾಸ್ ಉದ್ಘಾಟನೆ, ಕಾರ್ಯಾಗಾರ

ಉಡುಪಿ, ಸೆ.24:ವಿದ್ಯಾಥಿಗಳಲ್ಲಿ ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಯಬೇಕು. ಯುದ್ಧ ಕಾಲದಲ್ಲಿ ಸೈನಿಕರ ಸಾವು ನೋವುಗಳಿಗೆ ಸ್ಪಂಧಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ರೆಡ್‌ಕ್ರಾಸ್‌ನಂತಹ ಅಂತಾ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳು ಕೈ ಜೋಡಿಸಿದಾಗ ಸಮಾಜದ ಪ್ರಗತಿ ಸಾಧ್ಯ ಎಂದು ರೆಡ್‌ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.
ಉಡುಪಿ, ಸೆ.24:ವಿದ್ಯಾಥಿಗಳಲ್ಲಿ ಇತರರಿಗೆ ಸಹಾಯ ಮಾಡುವ ಮನೋಬಾವ ಬೆಳೆಯಬೇಕು. ಯುದ್ಧಕಾಲದಲ್ಲಿ ಸೈನಿಕರ ಸಾವು ನೋವುಗಳಿಗೆ ಸ್ಪಂಧಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ರೆಡ್‌ಕ್ರಾಸ್‌ನಂತಹಅಂತಾರಾಷ್ಟ್ರೀಯಸಂಸ್ಥೆಗಳೊಂದಿಗೆವಿದ್ಯಾರ್ಥಿಗಳುಕೈಜೋಡಿಸಿದಾಗಸಮಾಜದಪ್ರಗತಿಸ್ಯಾ ಎಂದು ರೆಡ್‌ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ. ಇತ್ತೀಚೆಗೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯೂತ್ ರೆಡ್‌ಕ್ರಾಸ್ ಘಟಕದ 2019-20ನೇ ಸಾಲಿನ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಯೂತ್ ರೆಡ್‌ಕ್ರಾಸ್ ಸಂಚಾಲಕ ಪ್ರೊ.ಉದಯ ಶೆಟ್ಟಿ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿ, ಶಿಲ್ಪಾ ವಂದಿಸಿದರು.
ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಸಂಸ್ಥೆಯ ಜಯರಾಮ ಆಚಾರ್ಯ ವಿದ್ಯಾರ್ಥಿ ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಥಮ ಚಿಕಿತ್ಸಾ ತರಬೇತುದಾರ ಡಾ. ಕೀರ್ತಿ ಪಾಲನ್ ಪ್ರಥಮ ಚಿಕಿತ್ಸಾ ಕಾರ್ಯಾಗಾರ ನಡೆಸಿಕೊಟ್ಟರು.







