ಹರೇಕಳ: ನಾಗಬನ ಪರಿಸರವನ್ನು ಸ್ವಚ್ಛಗೊಳಿಸಿದ ಮಸೀದಿ ಸಮಿತಿ

ಕೊಣಾಜೆ: ಹರೇಕಳ ಸಮೀಪದ ನಾಗಬನ ಪರಿಸರದ ಸ್ವಚ್ಛತಾಕಾರ್ಯವನ್ನು ಹರೇಕಳ ರಿಫಾಯಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಜಮಾತಿನ ವತಿಯಿಂದ ಭಾನುವಾರ ನಡೆಸಲಾಯಿತು.
ಮಸೀದಿಯ ಪರಿಸರ ಹಾಗು ಖಬರ್‌ಸ್ತಾನ ಸ್ವಚ್ಛತಾ ಕೆಲಸ ಜಮಾಹತ್ ನ ಜನರು ನಡೆಸಿದ್ದು, ಈ ಸಂದರ್ಭ ಪಕ್ಕದಲ್ಲೇ ಇದ್ದ ಕೊಳ್ಕೆ ಕುಟುಂಬಸ್ಥರ ನಾಗಬನ ಪರಿಸರದಲ್ಲಿ ಪೊದೆಗಳು ಆವರಿಸಿದ್ದನ್ನು ಕಂಡು ಅದನ್ನೂ ಸ್ವಚ್ಛಗೊಳಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಈ ಮೂಲಕ ಗ್ರಾಮದಲ್ಲಿ ಸೌಹಾರ್ದತೆ ಇನ್ನಷ್ಟು ಗಟ್ಟಿಗೊಳಿಸಿದಂತಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ಮಸೀದಿಯ ಪದಾಧಿಕಾರಿಗಳಾದ ಬದ್ರುದ್ದೀನ್ ಫರೀದ್‌ನಗರ, ಫೈಸಲ್, ಅಬೂಬಕ್ಕರ್, ನೌಫಲ್, ಅಬೂಬಕ್ಕರ್ ಸಿದ್ದೀಕ್, ಸದಕತ್ತುಲ್ಲಾ, ಅನ್ಸಾರ್ ಶರೀಫ್, ಎಚ್.ಇಸ್ಮಾಯಿಲ್, ರಶೀದ್, ಸಮದ್, ಅಬ್ದುಲ್ ಖಾದರ್, ಮುಹಮ್ಮದ್ ರಿಝ್ವಾನ್ ಇನ್ನಿತರರು ಉಪಸ್ಥಿತರಿದ್ದರು.
Next Story





