ವ್ಯವಸ್ಥಾಪನಾ ಮಂಡಳಿಯ ಸದಸ್ಯರ ನಾಮ ನಿರ್ದೇಶನ ಅಧಿಸೂಚನೆ ರದ್ದು
ಬೆಂಗಳೂರು, ಸೆ.24: ಬೀದರ್‌ನ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಲಾಗಿದ್ದ ವ್ಯವಸ್ಥಾಪನಾ ಮಂಡಳಿಯ ಸದಸ್ಯರ ನಾಮ ನಿರ್ದೇಶನ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ 2004 ಹಾಗೂ (ತಿದ್ದುಪಡಿ) ಅಧಿನಿಯಮ 2014 ರ ಪ್ರಕರಣ 27 ಬಿ-ಇತರ ಸದಸ್ಯರು- 1, 2, 3, 4 ಉಪ ಪ್ರಕರಣದಲ್ಲಿ ಪ್ರವರ್ಗಕ್ಕೆ ಅನುಗುಣವಾಗಿ 4 ಜನ ನಾಮನಿರ್ದೇಶಿತರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಆದರೆ, ಇದೀಗ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದುಕೊಳ್ಳಲಾಗಿದೆ ಎಂದು ಸರಕಾರದ ಅಪರ ಅಪರ ಮುಖ್ಯಕಾರ್ಯದಶಿಗಳ ಕಾರ್ಯಾಲಯ ಪ್ರಕಟನೆ ತಿಳಿಸಿದೆ.
Next Story





