ಇಎಂಡಿ ಮರುಪಾವತಿ ಪುನರ್ ಆರಂಭ
ಬೆಂಗಳೂರು, ಸೆ.24: ಇ-ಸಂಗ್ರಹಣಾ ತಂತ್ರಾಂಶದಲ್ಲಿ ತಾಂತ್ರಿಕ ಕಾರಣಗಳಿಗೆ ಸ್ಥಗಿತಗೊಳಿಸಲಾದ ಮುಂಗಡ ಠೇವಣಿ ಮೊತ್ತ ಇಎಂಡಿ ಮರುಪಾವತಿಯನ್ನು ಮರು ಪ್ರಾರಂಭಿಸಲಾಗಿದೆ.
ಎಲ್ಲಾ ನೋಂದಾಯಿತ ಸರಬರಾಜುದಾರರು ಇ-ಸಂಗ್ರಹಣಾ ತಂತ್ರಾಂಶದಲ್ಲಿ ತಮ್ಮ ಖಾತೆಗಳಿಗೆ ಲಾಗಿನ್ ಆಗಿ, ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿ ಸರಿಯಾಗಿರುವುದನ್ನು ದೃಢೀಕರಿಸಲು ಕೋರಿದೆ.
ಇಎಂಡಿ ಮರುಪಾವತಿಸಲು ಇದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಿದ ಸರಬರಾಜುದಾರರಿಂದ ಇಎಂಡಿ ಮರುಪಾವತಿ ಮಾಡಲಾಗುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲು ಸರಬರಾಜುದಾರರನ್ನು ಪ್ರಕಟನೆಯಲ್ಲಿ ವಿನಂತಿಸಲಾಗಿದೆ.
Next Story





