ಅ.23ಕ್ಕೆ ಬಿಸಿಸಿಐ ಚುನಾವಣೆ: ವಿನೋದ್ ರಾಯ್
ಹೊಸದಿಲ್ಲಿ, ಸೆ.24: ಹರ್ಯಾಣ ಹಾಗೂ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಬಿಸಿಸಿಐನ ಚುನಾವಣೆ ಅಕ್ಟೋಬರ್ 22ರ ಬದಲಿಗೆ 23ಕ್ಕೆ ನಡೆಯಲಿದೆ ಎಂದು ಭಾರತ ಕ್ರಿಕೆಟ್ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ ಅಧ್ಯಕ್ಷ(ಸಿಒಎ) ವಿನೋದ್ ರಾಯ್ ಮಂಗಳವಾರ ತಿಳಿಸಿದ್ದಾರೆ.
ಉಭಯ ರಾಜ್ಯಗಳ ಮತದಾನ ಪ್ರಕ್ರಿಯೆ ಒಂದೇ ಹಂತದಲ್ಲಿ ಅ.21 ರಂದು ನಡೆಯಲಿದೆ. ಅಕ್ಟೋಬರ್ 22 ರಂದು ಬಿಸಿಸಿಐ ಚುನಾವಣೆ ನಿಗದಿಪಡಿಸಿರುವುದಕ್ಕೆ ಎರಡೂ ಘಟಕಗಳಲ್ಲಿ ಮತದಾನದ ಹಕ್ಕು ಹೊಂದಿರುವ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಒಂದು ದಿನ ಮುಂದೂಡಲಾಗಿದೆ.
‘‘ಎರಡು ರಾಜ್ಯಗಳ ಚುನಾವಣೆಯ ಕಾರಣದಿಂದ ಒಂದು ದಿನ ತಡವಾಗಿ ಬಿಸಿಸಿಐನ ಚುನಾವಣೆಯ ವೇಳಾಪಟ್ಟಿ ಮರು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಚುನಾವಣೆಯು ಅ.22ರ ಬದಲಿಗೆ 23ಕ್ಕೆ ನಡೆಯಲಿದೆ’’ ಎಂದು ರಾಯ್ ಹೇಳಿದ್ದಾರೆ.
Next Story





