ಅನರ್ಹ ಶಾಸಕ ಭೈರತಿ ಬಸವರಾಜುಗೆ ಟಿಕೆಟ್ ನೀಡಬೇಡಿ: ಬಿಜೆಪಿ ಕಾರ್ಯಕರ್ತರ ಎಚ್ಚರಿಕೆ

ಬೆಂಗಳೂರು, ಸೆ.25: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕ ಭೈರತಿ ಬಸವರಾಜಗೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ, 2008ರಿಂದಲೂ ಕೆ.ಆರ್.ಪುರ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಶ್ರಮಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ 15 ಸಾವಿರ ಮತಗಳ ಮುನ್ನಡೆ ದೊರಕಿಸಿಕೊಟ್ಟಿದ್ದಾರೆ.
ಅನರ್ಹ ಶಾಸಕ ಬಸವರಾಜಗೆ ಟಿಕೆಟ್ ನೀಡುವುದರ ಮೂಲ ಬಿಜೆಪಿಯವರಿಗೆ ಅವಕಾಶ ವಂಚಿತರನ್ನಾಗಿಸುವುದು ಬೇಡ. ಇಷ್ಟೆಲ್ಲ ಆದರೂ, ನೀವೇನಾದರೂ ಬಸವರಾಜಗೆ ಬಿಜೆಪಿ ಟಿಕೆಟ್ ನೀಡಿದರೆ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂದು ಕಾರ್ಯಕರ್ತರು, ರಾಜ್ಯ ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story