ಭಾರತಕ್ಕೆ ಬನ್ನಿ, ಹೂಡಿಕೆ ಮಾಡಿ: ಅಮೆರಿಕ ಉದ್ಯಮವನ್ನು ಆಹ್ವಾನಿಸಿದ ಮೋದಿ

ನ್ಯೂಯಾರ್ಕ್, ಸೆ. 25: ತನ್ನ ಆಳ್ವಿಕೆಯ ಐದು ವರ್ಷಗಳಲ್ಲಿ ಭಾರತದಲ್ಲಿ ಆದ ಪ್ರಗತಿಯ ರಿಪೋರ್ಟ್ ಕಾರ್ಡನ್ನು ಪ್ರಧಾನಿ ನರೇಂದ್ರ ಮೋದಿ ಇಂದು ‘ಬ್ಲೂಮ್ ಬರ್ಗ್ ಜಾಗತಿಕ ವ್ಯಾಪಾರ ವೇದಿಕೆ’ಯಲ್ಲಿ ಮಂಡಿಸಿದ್ದಾರೆ ಹಾಗೂ ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ಅಮೆರಿಕದ ಉದ್ಯಮಕ್ಕೆ ಅವರು ಆಹ್ವಾನ ನೀಡಿದ್ದಾರೆ.
ಭಾರತವು ಹೂಡಿಕೆದಾರರ ಮಾದರಿ ಸ್ಥಳ ಎಂದು ಬಿಂಬಿಸಿದ ಅವರು, ‘‘ಭಾರತದ ಜೊತೆ ಭಾಗೀದಾರಿಕೆ ನಡೆಸುವುದು ಸುವರ್ಣಾವಕಾಶ’’ ಎಂದು ಬಣ್ಣಿಸಿದರು.
‘‘ನಿಮ್ಮ ಬಯಕೆಗಳು ಮತ್ತು ನಮ್ಮ ಕನಸುಗಳು ತಾಳೆಯಾಗುತ್ತವೆ. ನಿಮ್ಮ ತಂತ್ರಜ್ಞಾನ ಮತ್ತು ನಮ್ಮ ಪ್ರತಿಭೆ ಜಗತ್ತನ್ನು ಬದಲಿಸಬಲ್ಲದು. ನಿಮ್ಮ ವೇತನ ಮತ್ತು ನಮ್ಮ ಕೌಶಲ ಜಾಗತಿಕ ಆರ್ಥಿಕ ಬೆಳವಣಿಗೆಯ ಗತಿಯನ್ನು ತ್ವರಿತಗೊಳಿಸಬಲ್ಲದು. ಎಲ್ಲಿಯಾದರೂ ಅಂತರವಿದ್ದರೆ ನಾನು ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇನೆ’’ ಎಂದು ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
Next Story





