2020ರಲ್ಲಿ ಭಾರತಕ್ಕೆ ಝಿಂಬಾಬ್ವೆ ಬದಲಿಗೆ ಶ್ರೀಲಂಕಾ ತಂಡ ಪ್ರವಾಸ

ಹೊಸದಿಲ್ಲಿ, ಸೆ.25: ಬಿಸಿಸಿಐ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ 2020ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ತಂಡದ ಭಾರತ ಪ್ರವಾಸಕ್ಕೆ ವೇಳಾಪಟ್ಟಿಯನ್ನು ಘೋಷಿಸಿವೆ.
ಝಿಂಬಾಬ್ವೆ ತಂಡವನ್ನು ಐಸಿಸಿ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸುವಂತೆ ಶ್ರೀಲಂಕಾಕ್ಕೆ ಬಿಸಿಸಿಐ ಆಹ್ವಾನ ನೀಡಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಸರಣಿಯಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದೆ. ಝಿಂಬಾಬ್ವೆ ತಂಡವನ್ನು ಐಸಿಸಿ ಸದಸ್ಯತ್ವದಿಂದ ಅಮಾನತು ಗೊಳಿಸಲಾಗಿದೆ. ಲಂಡನ್‌ನಲ್ಲಿ ಈ ವರ್ಷದ ಜುಲೈನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ವಾನುಮತದ ನಿರ್ಣಯ ವೊಂದನ್ನು ತೆಗೆದುಕೊಂಡ ಐಸಿಸಿ, ಝಿಂಬಾಬ್ವೆ ಕ್ರಿಕೆಟ್‌ಗೆ ಮುಕ್ತ ಹಾಗೂ ಪ್ರಜಾಪ್ರಭುತ್ವ ಚುನಾವಣೆಗಳನ್ನು ನಡೆಸಲು ಪ್ರಕ್ರಿಯೆಯನ್ನು ಒದಗಿಸಲು ಸಾಧ್ಯವಾಗದ ಕಾರಣ ಈ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿತ್ತು. ಈ ನಿರ್ಧಾರದಿಂದಾಗಿ ಝಿಂಬಾಬ್ವೆ ಇನ್ನು ಮುಂದೆ ಐಸಿಸಿ ನಿಧಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ದೇಶವನ್ನು ಪ್ರತಿನಿಧಿಸುವ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸು ವಂತೆಯೂ ಇಲ್ಲ.





