ಜನವರಿಯಲ್ಲಿ ಮಸ್ಕತ್, ಶಾರ್ಜಾದಲ್ಲಿ ಶೈಕ್ಷಣಿಕ ಮೇಳ
ಬೆಂಗಳೂರು, ಸೆ. 25: ಬೆಂಗಳೂರಿನ ಕೆ-2 ಲರ್ನಿಂಗ್ ಆಯೋಜಿಸಿರುವ ದೇಶದ ಮುಂಚೂಣಿಯ ಶೈಕ್ಷಣಿಕ ಮೇಳ ಕೆರೀರ್ ಉತ್ಸವ್ ಭಾರತ ಮತ್ತು ಮಧ್ಯಪ್ರಾಚ್ಯದಲ್ಲಿ ಶೈಕ್ಷಣಿಕ ಮೇಳ ಆಯೋಜಿಸಿದ್ದು, 2020ರ ಜನವರಿ 9-10ರಂದು ಮಸ್ಕತ್‌ನಲ್ಲಿ, 22-23ರಂದು ಶಾರ್ಜಾದಲ್ಲಿ ನಡೆಯಲಿದೆ.
2019ರ ನವೆಂಬರ್ 15-16ರಂದು ಕೋಟದಲ್ಲಿ, ನ.30 ಮತ್ತು ಡಿ.1ರಂದು ಬೆಂಗಳೂರಿನಲ್ಲಿ ಮತ್ತು ಜೈಪುರದಲ್ಲಿ 21-22ರಂದು ಶೈಕ್ಷಣಿಕ ಮೇಳ ನಡೆಯಲಿದ್ದು, ಎರಡು ದಿನಗಳ ಶೈಕ್ಷಣಿಕ ಮೇಳದಲ್ಲಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಗುರುತಿಸಲು ಸಾಧ್ಯವಾಗಲಿದೆ.
ಎಜುಕೇಷನ್ ಗ್ರೋಥ್ ಸಮಿಟ್-2020 ಪ್ರಕಟಿಸಿದ ಶಾರ್ಜಾ ಎಕ್ಸ್‌ಪೊದ ಸೇಲ್ಸ್ ಅಂಡ್ ಮಾರ್ಕೆಟಿಂಗ್‌ನ ನಿರ್ದೇಶಕ ಸುಲ್ತಾನ್ ಶತಾಫ್, ಟಿಇಜಿಎಸ್ ಶಿಕ್ಷಣ ಕ್ಷೇತ್ರದಲ್ಲಿ ಆವಿಷ್ಕಾರ ಮತ್ತು ಆಧುನಿಕತೆಗೆ ಬದ್ಧವಾಗಿದ್ದು, ಶೈಕ್ಷಣಿಕ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸುಲ್ತಾನ್ ಶತಾಫ್, ಟಿಇಜಿಎಸ್‌ನ್ನು ಶಾರ್ಜಾದ ಇಂಟರ್‌ನ್ಯಾಷನಲ್ ಎಜುಕೇಷನ್ ಶೋ 16ನೆ ಆವೃತ್ತಿಯಲ್ಲಿ ಪರಿಚಯಿಸಲಾಗುತ್ತದೆ. ನಾವು 15 ವರ್ಷಗಳಿಂದ ಈ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ. ಪ್ರಾದೇಶಿಕ ಶೈಕ್ಷಣಿಕ ವಲಯದಲ್ಲಿ ತಮ್ಮ ಸೇವೆಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಒಂದೇ ಸೂರಿನಡಿ ನೀಡಲು ಪರಿಪೂರ್ಣ ವೇದಿಕೆ ಎಂದು ಹೇಳಿದರು.
ಕೆರೀರ್ ಉತ್ಸವ್ ಸಿಇಒ ಮತ್ತು ಸಂಸ್ಥಾಪಕ ಅಧ್ಯಕ್ಷ ಶ್ರೀಪಾಲ್ ಡಿ.ಜೈನ್, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಜಾಣ್ಮೆಯಿಂದ ಭವಿಷ್ಯದ ಶೈಕ್ಷಣಿಕ ಆಯ್ಕೆಗೆ ನಮ್ಮ ಶೈಕ್ಷಣಿಕ ಮೇಳ ನೆರವಾಗಲಿದೆ ಎಂದು ಹೇಳಿದರು. ಕೆರೀರ್ ಉತ್ಸವ್‌ಗೆ ವಿದ್ಯಾರ್ಥಿಗಳು www.careeruttsav.com ಗೆ ಭೇಟಿ ನೀಡಬಹುದು ನೋಂದಣಿ ಉಚಿತ ಎಂದು ಅವರು ತಿಳಿಸಿದರು.