ಉಳ್ಳಾಲ ಶೂಟೌಟ್ ಪ್ರಕರಣ: ಪೊಲೀಸ್ ಆಯುಕ್ತರನ್ನು ಭೇಟಿಯಾದ ಎಸ್‌ಡಿಪಿಐ ನಿಯೋಗ
ಮಂಗಳೂರು, ಸೆ.25: ಒಂದೇ ರಾಜಕೀಯ ಪಕ್ಷದ ಎರಡು ಗುಂಪುಗಳ ನಡುವೆ ರವಿವಾರ ರಾತ್ರಿ ನಡೆದ ಮಾರಾಮಾರಿ ಮತ್ತು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಘಟನಾ ಸ್ಥಳದಲ್ಲಿದ್ದ ಮತ್ತು ಮನೆಯಲ್ಲಿದ್ದ ಘಟನೆಗೆ ಸಂಬಂಧವೇ ಇಲ್ಲದ ರಹ್ಮಾನ್, ಮುಝಮ್ಮಿಲ್, ನಾಝಿಮ್, ಅರ್ಷದ್, ಸದ್ದಾಂ, ಅಲ್ಮಾಝ್ರನ್ನು ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಪ್ರಕರಣವನ್ನು ಕೈಬಿಡಬೇಕು ಎಂದು ಬುಧವಾರ ಎಸ್‌ಡಿಪಿಐ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಆಗ್ರಹಿಸಿತು.
ಈ ಸಂದರ್ಭ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಮುನೀಬ್ ಬೆಂಗ್ರೆ, ಎಸ್‌ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ, ಕ್ಷೇತ್ರ ಸಮಿತಿ ಸದಸ್ಯ ಸಿದ್ದೀಕ್ ಯು.ಬಿ. ಜಮಾಲ್ ಉಳ್ಳಾಲ ಉಪಸ್ಥಿತರಿದ್ದರು.
Next Story





