ಗುರುಪುರ ಗ್ರಾಪಂ ಜಮಾಬಂದಿ

ಗುರುಪುರ, ಸೆ.25: ಗುರುಪುರ ಗ್ರಾಪಂನ 2018-19ನೇ ಸಾಲಿನ ಜಮಾಬಂದಿಯು ಬುಧವಾರ ಗ್ರಾಪಂ ಸಭಾಭವನದಲ್ಲಿ ಜರುಗಿತು.
ವಾರ್ಷಿಕ ಕಾಮಗಾರಿಗಳ ಲೆಕ್ಕಪತ್ರ-ವರದಿ ವಾಚಿಸಿದ ಗ್ರಾಪಂ ಕಾರ್ಯದರ್ಶಿ ನಿತ್ಯಾನಂದ 2018-19ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 1 ಕೋ.ರೂ ಮಂಜೂರಾಗಿದ್ದು, ಕ್ರಿಯಾ ಯೋಜನೆ ಸಿದ್ಧಗೊಂಡಿದೆ. ಆದರೆ ಒಟ್ಟು ಮೊತ್ತದಲ್ಲಿ ಈವರೆಗೆ 36 ಲಕ್ಷ ರೂ. ಬಿಡುಗಡೆಯಾಗಿದ್ದು, 33 ಲಕ್ಷ ರೂ. ಕಾಮಗಾರಿ ಮುಗಿದಿದೆ ಮತ್ತು 3 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಮಂಜೂರಾತಿ ಮೊತ್ತದಲ್ಲಿ 64 ಲಕ್ಷ ರೂ. ಇನ್ನೂ ಬಿಡುಗಡೆಯಾಗಿಲ್ಲ ಎಂದರು.
14ನೇ ಹಣಕಾಸು ಯೋಜನೆಯಡಿ 46 ಲಕ್ಷ ರೂ. ಬಿಡುಗಡೆಯಾಗಿದ್ದು, ಶೇ 80ರಷ್ಟು ಕಾಮಗಾರಿ ಮುಗಿದಿದೆ. ಬಸವ ವಸತಿ ಯೋಜನೆಯಡಿ 104 ಮನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಹಂತವಾರು ಕಾಮಗಾರಿ ಮುಂದುವರಿದಿರುವುದನ್ನು ಸದಸ್ಯರು ಹಾಗೂ ಗ್ರಾಮಸ್ಥರ ಗಮನಹರಿಸಿದರು.
ಪಿಡಿಒ ಅಬೂಬಕ್ಕರ್ ಬಂದ ಬಳಿಕ ಗ್ರಾಪಂ ಅಭಿವೃದ್ಧಿ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಅವರು ಗ್ರಾಮದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ವಂದಿಸಿದರು. ಜಿಪಂ ಲೆಕ್ಕಾಧಿಕಾರಿ ಪ್ರೀತಿ ಮಗ್ಗಾವಿ ನೋಡೆಲ್ ಅಧಿಕಾರಿಯಾಗಿ ಜಮಾಬಂದಿ ನಡೆಸಿಕೊಟ್ಟರು. ವೇದಿಕೆಯಲ್ಲಿ ಜಿಪಂ ಅಭಿವೃದ್ಧಿ ಶಾಖೆ ಅಧೀಕ್ಷಕಿ ಸರೋಜಿನಿ, ಜಿಪಂ ಸದಸ್ಯ ಯುಪಿ ಇಬ್ರಾಹೀಂ, ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಸೇಸಮ್ಮ, ರಾಜೇಶ ಸುವರ್ಣ, ಸಂಪಾ, ಹನೀಫ್, ಗ್ಲಾಡಿಸ್ ಕ್ವಾಡ್ರಸ್, ಉಮೈ ಬಾನು, ಟಿ. ಅಹ್ಮದ್ ಬಾವ, ಚಂದ್ರಾವತಿ, ಭೀಪಾತುಮ್ಮ, ಗ್ರಾಪಂ ಸಿಬ್ಬಂದಿ ಚಂದ್ರಕಲಾ, ಇರ್ಶಾದ್, ತಿಮ್ಮಪ್ಪಮತ್ತಿತರರು ಉಪಸ್ಥಿತರಿದ್ದರು.







