Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕುಕ್ಕರಹಳ್ಳಿ ಕಥಾಲೋಕದ ಹೆಬ್ಬಾಗಿಲು...

ಕುಕ್ಕರಹಳ್ಳಿ ಕಥಾಲೋಕದ ಹೆಬ್ಬಾಗಿಲು ತಟ್ಟಿ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ26 Sept 2019 12:01 AM IST
share
ಕುಕ್ಕರಹಳ್ಳಿ ಕಥಾಲೋಕದ ಹೆಬ್ಬಾಗಿಲು ತಟ್ಟಿ....

ಇತ್ತೀಚಿನ ದಿನಗಳಲ್ಲಿ ಗಂಭೀರ ವಿಮರ್ಶೆ ಹಿಂದಕ್ಕೆ ಸರಿದಿದೆ. ಕತೆಗಳು ಸಮಯ ಕಳೆಯುವ ಬಗೆಯಷ್ಟೇ ಆಗಿ ಕಿರಿದಾಗುತ್ತಾ ಕಿರಿದಾಗುತ್ತಾ ನ್ಯಾನೋ ಪ್ರಕಾರಕ್ಕೆ ತಲುಪಿದೆ. ಒಂದು ಕಾಲದ ಸಣ್ಣ ಕತೆಗಳು ಇಂದಿನ ಕಾಲಕ್ಕೆ ನೀಳ್ಗತೆಗಳೇ ಸರಿ. ಹಿಂದಿನ ನೀಳ್ಗತೆಗಳನ್ನು ಇಂದು ಮಿನಿ ಕಾದಂಬರಿ ಎಂದು ಕರೆಯಬೇಕಾಗುತ್ತದೆ. ಹೀಗಿರುವಲ್ಲ್ಲಿ, ಒಬ್ಬ ಕಥೆಗಾರ ಎಲ್ಲ ಕತೆಗಳನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸುವುದು ದೂರದ ಮಾತು. ಕೆಲವೊಮ್ಮೆ ಅಂತಹ ಅಪರೂಪದ ಪ್ರಯತ್ನಗಳು ನಡೆಯುತ್ತವೆ. ಇಲ್ಲಿ ‘ಬಸವರಾಜು ಕುಕ್ಕರಹಳ್ಳಿ ಕಥಾಲೋಕ’ದ ಕುರಿತಂತೆ ವಿಮರ್ಶಾ ಲೇಖನಗಳ ಸಂಕಲನದಲ್ಲಿ ಅಂತಹದೊಂದು ಪ್ರಯತ್ನ ಮಾಡಲಾಗಿದೆ. ಡಾ. ನೀಲಗಿರಿ ತಳವಾರ, ಡಾ. ಯೋಗೇಶ್ ಎನ್. ಅವರ ಸಂಪಾದಕತ್ವದಲ್ಲಿ ಈ ಕೃತಿಯನ್ನು ಹೊರತರಲಾಗಿದೆ.

‘‘ಬೆಸಗರಹಳ್ಳಿ ರಾಮಣ್ಣ ಹಾಗೂ ಜಯಂತ ಕಾಯ್ಕಿಣಿಯವರ ಕಥೆಗಳ ಆನಂತರದ ನಮ್ಮ ಸಂದರ್ಭದ ಮಹತ್ವದ ಕಥೆಗಾರರು ಎಂಬುದನ್ನು ಬಸವರಾಜು ಕುಕ್ಕರಹಳ್ಳಿ ಅವರ ಕಥೆಗಳು ಕಾಣಿಸುತ್ತವೆ. ಗಾತ್ರ ಮತ್ತು ಪಾತ್ರ ಎರಡರಲ್ಲೂ ಬಸವರಾಜು ಕುಕ್ಕರಹಳ್ಳಿ ಅವರ ಕಥಾ ಸಾಹಿತ್ಯ ಗಮನಾರ್ಹವಾಗಿದೆ. ಕಥಾ ಪ್ರಕಾರಕ್ಕೆ ಮಾತ್ರವೇ ಕುಕ್ಕರಹಳ್ಳಿ ತಮ್ಮ ಬರವಣಿಗೆಯನ್ನು ನಿಗದಿ ಪಡಿಸಿಕೊಂಡು ಬಂದಿರುವುದು ಸಹ ಒಂದು ವಿಶೇಷವೆಂದೇ ಹೇಳಬೇಕು. ಗ್ರಾಮೀಣ ದಲಿತ ಸಮುದಾಯದಿಂದ ಬಂದ ಅವರು ಇಂಡಿಯಾದ ವರ್ತಮಾನ ಬದುಕಿನ ಬಡತನ, ಬವಣೆಗಳು, ಕನಸಗಳು ಮಾತ್ರವಲ್ಲ ಅಲ್ಲಿರುವ ಜೀವನ ಪ್ರೀತಿ, ಬದುಕಿನೊಡನೆ ಹೋರಾಡುವ ಛಲ ಸಂಬಂಧಗಳ ಸ್ವರೂಪವನ್ನು ತಮ್ಮ ಕತೆಗಳಲ್ಲಿ ಕಟ್ಟಿಕೊಡುತ್ತಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೇ ಬದುಕನ್ನು ಕಟ್ಟಿಕೊಳ್ಳುವ ರೀತಿ ಹೊಸತನಕ್ಕೆ ತೆರೆದುಕೊಳ್ಳುವ ಹಂಬಲ, ಬದುಕನ್ನು ಇತರರಂತೆ ಅನುಭವಿಸುವ ಅಭೀಪ್ಸೆಯನ್ನು ಗುರುತಿಸಬಹುದು...’’ ಎಂದು ಕೃತಿಯ ಸಂಪಾದಕರು ಅಭಿಪ್ರಾಯಪಟ್ಟುತ್ತಾರೆ.

 ಕನ್ನಡದ ಮಹತ್ವದ 29 ಲೇಖಕರು ಕುಕ್ಕರಹಳ್ಳಿ ಅವರ ಕತೆಗಳ ಕುರಿತಂತೆ ಈ ಕೃತಿಯಲ್ಲಿ ಬರೆದಿದ್ದಾರೆ. ಕೇಶವಮಳಗಿ, ಆರ್. ವಿಜಯರಾಘವನ್, ಡಾ. ಕವಿತಾ ರೈ, ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ, ಡಾ. ಸಬಿತಾ ಬನ್ನಾಡಿ, ಡಾ. ವಿಜಯಕುಮಾರಿ ಎಸ್. ಕರಿಕಲ್, ಡಾ. ಪ್ರಹ್ಲಾದ ಅಗಸನ ಕಟ್ಟೆ, ಡಾ. ನಟರಾಜ ಬೂದಾಳ್, ವಿ. ಎನ್. ವೆಂಕಟಲಕ್ಷ್ಮಿ, ಡಾ. ಅಪ್ಪಗೆರೆ ಸೋಮಶೇಖರ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಡಾ. ರಹಮತ್ ತರೀಕೆರೆ, ಡಾ. ಪಿ. ಚಂದ್ರಿಕಾ ಮೊದಲಾದವರ ಮಹತ್ವದ ಲೇಖನಗಳು ಇಲ್ಲಿವೆ. ಡಾ. ಶಿಲ್ಪಶ್ರೀ ಎಚ್. ವಿ. ಮತ್ತು ಡಾ. ಶಿವಕುಮಾರ ಕಾರೇಪುರ ಅವರು ಕಥೆಗಾರರನ್ನು ಸಂದರ್ಶನ ಮಾಡಿದ್ದಾರೆ. ಹಾಗೆಯೇ ಕೆಲವು ಪತ್ರಗಳೂ ಕತೆಗಾರರ ಕುರಿತಂತೆ ಇನ್ನಷ್ಟನ್ನು ತೆರೆದಿಡುತ್ತವೆ.

ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 208. ಮುಖಬೆಲೆ 210 ರೂಪಾಯಿ. ಆಸಕ್ತರು 94483 50932 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X