ಮನರಂಜನೆ ಜತೆ ದೇವಭಕ್ತಿ ಮೂಡಲು ಹರಿಕಥೆ ಸಹಕಾರಿ: ಪಲಿಮಾರು ಶ್ರೀ

ಉಡುಪಿ, ಸೆ.26: ಜನರಿಗೆ ಮನೋರಂಜನೆ ನೀಡುವುದರ ಜೊತೆಗೆ ಮನಸ್ಸಿ ನಲ್ಲಿ ದೇವರನ್ನು ನೆಲಸುವಂತೆ ಮಾಡಲು ಹರಿಕಥೆ ಬಹಳಷ್ಟು ಸಹಕಾರಿ. ಈ ನಿಟ್ಟಿನಲ್ಲಿ ಹರಿಕಥಾ ಪರಿಷತ್ ಸಮೃದ್ಧವಾಗಿ ಬೆಳೆದು ಗ್ರಾಮೀಣ ಭಾಗದಲ್ಲಿ ಹರಿಕಥೆ ಬಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು ಮಂಗಳೂರು, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಮತ್ತು ಕಾರ್ಕಳ ಶ್ರೀಹಂಡೆದಾಸ ಪ್ರತಿಷ್ಠಾನದ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದಲ್ಲಿ 60 ದಿನಗಳ ಕಾಲ ಹಮ್ಮಿಕೊಂಡ ಹರಿಕಥಾ ಜ್ಞಾನಯಜ್ಞದ ಸಮಾರೋಪ ಸಮಾರಂಭದ ವೇಳೆ ಗುರುವಾರ ರಾಜಾಂಗಣದಲ್ಲಿ ನಡೆದ ‘ಹರಿದಾಸ ಸಮ್ಮೇಳನ’ದಲ್ಲಿ ಅವರು ಆಶೀರ್ವಚನ ನೀಡಿದರು.
ಉಡುಪಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ದೇವಾನಂದ ಉಪಾ ಧ್ಯಾಯ, ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ, ಬೆಂಗಳೂರು ಕೀರ್ತನ ಕಲಾ ಪರಿಷತ್‌ನ ಲೋಕೇಶ ದಾಸ, ಕಾರ್ಕಳ ಹಂಡೆದಾಸ ಪ್ರತಿಷ್ಠಾನದ ರುಕ್ಮಣಿ ಹಂಡೆ, ಬೆಂಗಳೂರು ನಾಗರಾಜ್ ಉಪಸ್ಥಿತರಿದ್ದರು.
ಹರಿಕಥಾ ಪರಿಷತ್ತಿನ ಉಡುಪಿ ಜಿಲ್ಲಾ ಸಂಚಾಲಕ ವೈ.ಅನಂತ ಪದ್ಮನಾಭ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ತೋನೆ್ಸ ಪುಷ್ಕಳ್ ಕುಮಾರ್ ವಂದಿಸಿದರು.







