ಪುತ್ತೂರು: ಪ್ರೊ. ಭಗವಾನ್ ಸಹಿತ ಮೂವರ ವಿರುದ್ಧ ದೂರು
ಪುತ್ತೂರು: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಜತೆಗೆ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ, ಪ್ರೊ. ಮಹೇಶ್ಚಂದ್ರ ಮತ್ತು ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ನಗರದ ನೆಲ್ಲಿಕಟ್ಟೆ ನಿವಾಸಿಗಳಾದ ಹರಿಪ್ರಸಾದ್ ಶೆಟ್ಟಿ ಮತ್ತು ಸತೀಶ್ ಭಂಡಾರಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಈ ಮೂವರು ಹೇಳಿಕೆ ನೀಡಿದ್ದಾರೆ. ಅಲ್ಲದೇ ನಂಬಿಕೆ ಮತ್ತು ಆಚರಣೆಗಳಿಗೆ ಘಾಸಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿರುವ ನಮಗೆ ಈ ಮೂವರ ಹೇಳಿಕೆಯಿಂದಾಗಿ ನೋವಾಗಿದೆ. ನಾವು ನಿತ್ಯ ಪೂಜಿಸುವ ದೇವರುಗಳನ್ನು ಆರೋಪಿಗಳು ಸುಟ್ಟು ಹಾಕುವುದಾಗಿ ಹೇಳಿರುವುದರಿಂದ ನಮಗೆ ಆಘಾತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story





