ಮಂಗಳೂರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಐಸಾಕ್ ವಾಸ್
ಮಂಗಳೂರು, ಸೆ. 26: ಮಂಗಳೂರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2019-20 ಸಾಲಿನ ಅಧ್ಯಕ್ಷರಾಗಿ ಐಸಾಕ್ ವಾಸ್ ಆಯ್ಕೆ ಗೊಂಡಿದ್ದಾರೆ.
ಬುಧವಾರ ನಡೆದ ಕೆಸಿಸಿಐಯ 79ನೆ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಶಿಧರ ಪೈ ಮಾರೂರು, ಕಾರ್ಯದರ್ಶಿಗಳಾಗಿ ನಿಸಾರ್ ಫಕೀರ್ ಮುಹಮ್ಮದ್ ಮತ್ತು ದಿವಾಕರ ಪೈ ಕೊಚ್ಚಿಕಾರ್, ಖಜಾಂಜಿಯಾಗಿ ಗಣೇಶ್ ಕಾಮತ್, ನಿರ್ದೇಶಕರಾಗಿ ನಿಟ್ಟೆ ಯತಿರಾಜ್ ಶೆಟ್ಟಿ, ಬಿ.ಎ.ನಝೀರ್, ಅನಂತೇಶ ವಿ.ಪ್ರಭು, ಅಮಿತ್ ರಾಮಚಂದ್ರ ಆಚಾರ್ಯ, ಆದಿತ್ಯ ಪದ್ಮ ನಾಭ ಪೈ, ಅಬ್ದುಲ್ ರಹ್ಮಾನ್ ಮೂಸಬ್ಬ, ಪಿ.ಬಿ.ಅಹಮ್ಮದ್ ಮುದಾಸ್ಸರ್, ಆತ್ಮಿಕಾ ಸುಬ್ಬಯ್ಯ, ಅಮಿನ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





