ಬಂಟ್ವಾಳ: ಅಕ್ರಮ ಸಾಗಾಟ ಆರೋಪ; ಜಾನುವಾರು ವಶಕ್ಕೆ
ಬಂಟ್ವಾಳ : ಅಕ್ರಮ ಮಾರಾಟದ ಉದ್ದೇಶ ಹಾಗೂ ಕಳವು ಮಾಡಿರುವ ಆರೋಪದ ಮೇರೆಗೆ 11 ಜಾನುವಾರುಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿ ಫರಂಗಿಪೇಟೆಯಲ್ಲಿ ಗುರುವಾರ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಮತ್ತವರ ಸಿಬ್ಬಂದಿ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿಗೆ ದಾಳಿ ನಡೆಸಿದೆ. ಈ ವೇಳೆ ವಾರಸುದಾರಿಲ್ಲದ ಹಾಗೂ ಜಾನುವಾರುಗಳ ಕಳವು ಆರೋಪದಡಿ 11 ಜಾನುವಾರುಗಳನ್ನು ವಶಪಡಿಸಿಕೊಂಡಿದೆ. ಇವುಗಳ ಒಟ್ಟು ಮೌಲ್ಯ 1,01,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





