ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ

ಮೂಡುಬಿದಿರೆ: ತುಳು ಭಾಷೆ ಉಳಿಯಬೇಕಾದರೆ ಅದರಲ್ಲಿ ಕಲಾವಿದ, ಲೇಖಕರು ಮತ್ತು ಯಕ್ಷಗಾನ ಕಲಾವಿದರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ನಮ್ಮದು ಶ್ರೀಮಂತ ಸಂಸ್ಕೃತಿಯ ನಾಡು. ತುಳು ಸಂಸ್ಕೃತಿ, ಭಾಷೆ ಉಳಿಯುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತುಳು ರಂಗಭೂಮಿ, ಸಿನಿಮಾ ಕಲಾವಿದ ಅರವಿಂದ್ ಬೋಳಾರ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಳ್ವಾಸ್ ಕಾಲೇಜ್ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ ವಿರಾಸತ್ ಮತ್ತು ನುಡಿಸಿರಿಯ ಮೂಲಕ ಇದರಿಂದ ಸಂಸ್ಕೃತಿ ಮತ್ತು ಸಂಪ್ರಾದಯದೋಂದಿಗೆ ವಿಚಾರ ವಿನಿಮಯ ಮಾಡಲು ಸಾಧ್ಯ ಎಂದರು.
ತುಳು ಸಂಘದ ವತಿಯಿಂದ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್‍ನ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕೃಷಿ, ತುಳುರಂಗಭೂಮಿಯಿಂದ ತುಳು ಭಾಷೆ ಸಮೃದ್ಧವಾಗಿದೆ. ತುಳು ಭಾಷೆಯ ಮುಖಾಂತರ ತುಳುವರನ್ನು ಸಂಘಟಿಸುವ ಪ್ರಯತ್ನವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಯುವಜನರು ನಮ್ಮ ಸಂಸ್ಕೃತಿ ಉಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ತುಳು ಸಂಘದ ಸಂಯೋಜಕ, ಪ್ರಾಧ್ಯಾಪಕ ಕೆ.ವಿ ಸುರೇಶ್ ಮತ್ತು ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಕಲ್ಕುಡ - ಕಲ್ಲುಟಿ ಪೌರಣಿಕ ನಾಟಕ ಮತ್ತು ತುಳು ನೃತ್ಯ ಪ್ರದರ್ಶನಗೊಂಡಿತು.







