ಮಾಲ್ ನಲ್ಲಿ ಹಲ್ಲೆ ಪ್ರಕರಣ: ನಳಿನ್ ರಾಜಕೀಯ ಬಳಕೆಗೆ ಯು.ಟಿ. ಖಾದರ್ ಖಂಡನೆ
ಮಂಗಳೂರು, ಸೆ. 26: ನಗರದ ಖಾಸಗಿ ಮಾಲ್ ನಲ್ಲಿ ಬುಧವಾರ ನಡೆದ ಹಲ್ಲೆ ಪ್ರಕರಣವೊಂದನ್ನು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀವಾಗಿ ದುರ್ಬಳಕೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿರುವುದಾಗಿ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ, ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಕೇವಲ ಬಿಜೆಪಿ ರಾಜ್ಯಾಧ್ಯಕ್ಷನಲ್ಲ. ಸಂಸದ ಎಂಬ ಪ್ರಜ್ಞೆ ಬೇಕು. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಿ ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕಿತ್ತು. ಆದರೆ ನಳಿನ್ ರ ಹೇಳಿಕೆಯು ಮತೀಯ ಶಕ್ತಿಗಳಿಗೆ ಪ್ರೇರಣೆ ನೀಡುವಂತಿತ್ತು. ಹಾಗಾಗಿ ಪೊಲೀಸ್ ಇಲಾಖೆಯು ಈ ಬಗ್ಗೆ ತನಿಖೆ ನಡೆಸಬೇಕಿದೆ. ಅಹಿತಕರ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಡು ವದಂತಿ ಹಬ್ಬುತ್ತಿದ್ದು, ಪೊಲೀಸ್ ಇಲಾಖೆಯು ವಾಸ್ತವ ಏನು ಎಂಬುದನ್ನು ಬಹಿರಂಗಪಡಿಸಿ ಗೊಂದಲ ನಿವಾರಿಸಬೇಕು ಎಂದು ಯುಟಿ ಖಾದರ್ ತಿಳಿಸಿದ್ದಾರೆ.
Next Story





